alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿ ಜೊತೆ ಪತಿಗೆ ಇನ್ನೊಂದು ಮದುವೆ ಮಾಡಿಸಿದ್ಲು…!?

ಪಾಕಿಸ್ತಾನದ ಮುಲ್ತಾನ್ ನಲ್ಲಿ ಮಹಿಳೆಯೊಬ್ಬಳು ತನ್ನ ಸಹೋದರಿ ಮದುವೆಯನ್ನು ತನ್ನ ಪತಿ ಜೊತೆ ಮಾಡಿಸಿದ್ದಾಳೆ. ಸಹೋದರಿಯನ್ನು ಬಿಟ್ಟಿರಲು ಸಾಧ್ಯವಾಗದ ಕಾರಣ ಮಹಿಳೆ ಹೀಗೆ ಮಾಡಿದ್ದಾಳೆ ಎನ್ನಲಾಗಿದೆ.

ಫರಾಜ್ ಎಂಬಾತನ ಮದುವೆ ಒಂದುವರೆ ತಿಂಗಳ ಹಿಂದೆ ನಡೆದಿದೆ. ಫರಾಜ್ ಪತ್ನಿ ಅಲಿನಾ ತನ್ನ ಸಹೋದರಿ ಆಲಿಸ್ಮಾ ಮದುವೆಯನ್ನು ಒಂದು ವಾರದ ಹಿಂದೆ ತನ್ನ ಪತಿ ಜೊತೆ ಮಾಡಿಸಿದ್ದಾಳೆ. ಬಾಲ್ಯದಿಂದಲೂ ಇಬ್ಬರು ಒಟ್ಟಿಗೆ ಬೆಳೆದಿದ್ದಾರಂತೆ. ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಇರಲಿಲ್ಲವಂತೆ.

ಮದುವೆಯಾದ ಕೆಲ ದಿನ ಹೇಗೋ ಕಳೆಯಿತು. ಆದ್ರೆ ಸಹೋದರಿ ನೆನಪು ಸದಾ ಕಾಡುತ್ತಿತ್ತು. ಹಾಗಾಗಿ ಈ ನಿರ್ಧಾರಕ್ಕೆ ಬಂದೆ ಎನ್ನುತ್ತಾಳೆ ಆಲಿಸ್ಮಾ. ಸೋದರಿ ಕೂಡ ಇದನ್ನೇ ಹೇಳಿದ್ದಾಳೆ. ನಾವಿಬ್ಬರು ದೂರವಿದ್ರೆ ಬದುಕೋದು ಕಷ್ಟ ಎಂದಿದ್ದಾಳೆ. ಫರಾಜ್ ಜೊತೆ ಸಹೋದರಿಯರಿಬ್ಬರು ಸಂತೋಷವಾಗಿದ್ದಾರಂತೆ. ಆದ್ರೆ ಅವರ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ಇದು ಚರ್ಚೆಯ ವಿಷಯವಾಗಿದೆ. ಕೆಲವರು ಹಾಸ್ಯ ಮಾಡಿದ್ರೆ ಮತ್ತೆ ಕೆಲವರು ಸಂಪ್ರದಾಯದ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮತ್ತೆ ಕೆಲವರು ಅವರ ವೈಯಕ್ತಿಕ ವಿಚಾರ ನಮಗೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...