alex Certify
ಕನ್ನಡ ದುನಿಯಾ       Mobile App
       

Kannada Duniya

ಫೋನ್ ನಲ್ಲಿ ಪೋರ್ನ್ ನೋಡಿದ್ರೆ ತಪ್ಪಿದ್ದಲ್ಲ ತೊಂದ್ರೆ…!

5 reasons why you should not watch porn on your smartphone

ಇಂಟರ್ನೆಟ್ ಹವಾ ಜೋರಾಗ್ತಿದ್ದಂತೆ ಭಾರತದಲ್ಲಿ ಸ್ಮಾರ್ಟ್ ಫೋನ್ ಮೂಲಕ ಅಶ್ಲೀಲ ಚಿತ್ರ ವೀಕ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕಾನೂನು ಹಾಗೂ ನೈತಿಕತೆಯ ವಿಚಾರವೇನೇ ಇದ್ರೂ ಸ್ಮಾರ್ಟ್ ಫೋನ್ ನಲ್ಲಿ ಪೋರ್ನ್ ಚಿತ್ರ ನೋಡುವ ಮುನ್ನ ನೀವು ತಾಂತ್ರಿಕ ವಿಷಯಗಳ ಬಗ್ಗೆ ಗಮನ ಹರಿಸಲೇಬೇಕು. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ನೀವ್ಯಾಕೆ ಅಶ್ಲೀಲ ಚಿತ್ರ ನೋಡಬಾರ್ದು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

Ransomware : ಆನ್ ಲೈನ್ ನಲ್ಲಿ ಹಣ ಪಾವತಿಸಿ ಪೋರ್ನ್ ಚಿತ್ರ ನೋಡುವವರನ್ನು ವಂಚಕರು ಪತ್ತೆ ಮಾಡುತ್ತಾರೆ. ಗೊತ್ತಿರದ ವೆಬ್ ಸೈಟ್ ಗೆ ವಿಸಿಟ್ ಮಾಡಿದಾಗ ಹೊಸ ಪಾಪ್ ಅಪ್ ವಿಂಡೋ ಓಪನ್ ಆಗಿ ಫೋನ್ ಬ್ಲಾಕ್ ಆಗಿಬಿಡುತ್ತದೆ. ಆನ್ ಲೈನ್ ನಲ್ಲಿ ಹಣ ಪಾವತಿಸಿದ ಬಳಿಕವೂ ನಿಮ್ಮ ಫೋನ್ ಅನ್ ಲಾಕ್ ಆಗುತ್ತದೆ ಅನ್ನೋ ಗ್ಯಾರಂಟಿಯಿಲ್ಲ.

ಮಕ್ಕಳ ಅಶ್ಲೀಲ ಚಿತ್ರ : ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆ ಸಂದರ್ಭದಲ್ಲಿ ನೀವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಹ್ಯಾಕರ್ ಗಳು ಸುಲಭವಾಗಿ ಪೋರ್ನ್ ದೃಶ್ಯಗಳನ್ನು ನಿಮ್ಮ ಸಿಸ್ಟಮ್ ನಲ್ಲಿ ಸ್ಟೋರ್ ಮಾಡಿಬಿಡುತ್ತಾರೆ. ನಿಮ್ಮ ವಿರುದ್ಧ ಸಾಕ್ಷ್ಯ ದೊರೆಯುವುದರಿಂದ ನೀವು ಜೈಲು ಸೇರುವ ಸಾಧ್ಯತೆಗಳಿರುತ್ತವೆ.

ಆನ್ ಲೈನ್ ಹ್ಯಾಕಿಂಗ್ : ಪ್ರತಿನಿತ್ಯ ಟ್ರ್ಯಾಕ್ ಮಾಡುತ್ತಲೇ ಇರುವ ಕಂಪನಿಗಳಿವೆ, ನಿಮಗೆ ಯಾವ ರೀತಿಯ ಜಾಹೀರಾತು ಪೋಸ್ಟ್ ಮಾಡಬೇಕು ಅನ್ನೋದು ಅವರಿಗೆ ಗೊತ್ತು. ಬಹುತೇಕ ಎಲ್ಲರೂ ಅವರ ಬ್ಯಾಂಕಿಂಗ್ ಸೇವೆ, ಇ ಮೇಲ್ ಐಡಿಗಳನ್ನೆಲ್ಲ ಸ್ಮಾರ್ಟ್ ಫೋನ್ ನಲ್ಲಿ ಸಿಂಕ್ರೊನೈಸ್ ಮಾಡಿರುತ್ತಾರೆ. ಆಗ ನಿಮ್ಮ ವೈಯಕ್ತಿಕ ಡೇಟಾಗಳನ್ನು ಕದಿಯುವುದು ಹ್ಯಾಕರ್ ಗಳಿಗೆ ಬಹಳ ಸುಲಭ. ಕುಕ್ಕೀಸ್ ಡಿಲೀಟ್ ಮಾಡಿದ್ರೆ, ಪ್ರೈವೇಟ್ ಬ್ರೌಸಿಂಗ್ ಆಯ್ದುಕೊಂಡ್ರೆ ಆನ್ ಲೈನ್ ಹ್ಯಾಕರ್ ಗಳಿಂದ ನೀವು ಪಾರಾಗಬಹುದು. ಇದರಲ್ಲೂ ನೂರಕ್ಕೆ ನೂರರಷ್ಟು ಸೇಫ್ಟಿ ಇಲ್ಲ.

ಬಲವಂತದ ಅಥವಾ ಹಣ ಪಾವತಿಸುವ ಅನಗತ್ಯ ಸೇವೆ : ಇಂತಹ ಅಶ್ಲೀಲ ದೃಶ್ಯಗಳನ್ನೊಳಗೊಂಡ ಸೈಟ್ ಗಳಲ್ಲಿ ಹಣ ಪಾವತಿಸಿ ಪಡೆಯಬಹುದಾದ ಅನಗತ್ಯ ಸೇವೆಗಳಾದ ಎಸ್ಎಂಎಸ್, ಪ್ರೀಮಿಯಂ ಎಸ್ಎಂಎಸ್, ವ್ಯಾಪ್, ಲೊಕೇಶನ್ ನಂತಹ ಸೇವೆಗಳನ್ನು ಆ್ಯಕ್ಟಿವೇಟ್ ಮಾಡಲು ಹ್ಯಾಕರ್ ಗಳು ಕಾಯುತ್ತಿರುತ್ತಾರೆ. ಪೋರ್ನ್ ಸೈಟನ್ನು ಓಪನ್ ಮಾಡಿದಾಗ ನಿಮಗೆ ಗೊತ್ತಿಲ್ಲದೆಯೇ ಅಂತಹ ಸೇವೆಗಳು ಆ್ಯಕ್ಟಿವೇಟ್ ಆಗುತ್ತವೆ.

ಪೋರ್ನ್ ಟಿಕ್ಕರ್ : ನೀವೇನು ನೋಡುತ್ತಿದ್ದೀರಾ ಅನ್ನೋದು ಕೇವಲ ಸರ್ವೀಸ್ ಪ್ರೊವೈಡರ್ ಗಳಿಗೆ ಮಾತ್ರವಲ್ಲ, ನೀವು ಡೌನ್ ಲೋಡ್ ಮಾಡಿದ ಆ್ಯಪ್ ಮತ್ತು ಬ್ರೌಸರ್ ಟ್ರ್ಯಾಕ್ ಮಾಡುತ್ತಿರುವವರಿಗೆ ಗೊತ್ತಾಗುತ್ತದೆ. ಇದ್ರಿಂದ ಸೆಕ್ಯೂರಿಟಿ ತಲೆನೋವು ಉದ್ಭವವಾಗುವ ಸಾಧ್ಯತೆ ಹೆಚ್ಚು. ಸ್ಮಾರ್ಟ್ ಫೋನ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಸಂದರ್ಭದಲ್ಲಿ ಪೋರ್ನ್ ಟಿಕ್ಕರ್ ಗಳು, ನಕಲಿ ಆ್ಯಪ್ ಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಂಬಿ ನೀವು ಹಳ್ಳಕ್ಕೆ ಬೀಳುವ ಆತಂಕ ಇದ್ದೇ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...