alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸಿದ ಮೇಲೆ ಸಂಗಾತಿ ಬದಲಿಸೋದೇಕೆ?

ತೂಕ ಇಳಿಸುವ ಶಸ್ತ್ರಚಿಕಿತ್ಸೆ, ಸಂಬಂಧದ ಮೇಲೆ ಪರಿಣಾಮ ಬೀರುತ್ತೆ ಅಂದ್ರೆ ನಂಬ್ತೀರಾ. ಅಧ್ಯಯನವೊಂದರ ಪ್ರಕಾರ ನಂಬಲೇಬೇಕು. ತೂಕ ಇಳಿಸಲು ಶಸ್ತ್ರಚಿಕಿತ್ಸೆಗೊಳಗಾಗುವ ಬಹುತೇಕ ವ್ಯಕ್ತಿಗಳು ಶಸ್ತ್ರಚಿಕಿತ್ಸೆ ನಂತ್ರ ತಮ್ಮ ಸಂಗಾತಿಗಳನ್ನು ಬದಲಿಸ್ತಾರಂತೆ.

ಸ್ವೀಡಿಶ್ ಅಧ್ಯಯನದ ಪ್ರಕಾರ ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೊಳಗಾಗುವ ಬಹುತೇಕರು ಸಂಗಾತಿ ಬದಲಿಸುತ್ತಾರಂತೆ. ವಿವಾಹಿತರು ವಿಚ್ಛೇದನಕ್ಕೆ ಮುಂದಾಗ್ತಾರಂತೆ. ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದ ಪ್ರಕಾರ, ತೂಕ ಇಳಿಸಿಕೊಳ್ಳುವ ಶಸ್ತ್ರಚಿಕಿತ್ಸೆಗೊಳಗಾಗುವವರಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಹೆಚ್ಚಿನ ಜನರ ಸಂಬಂಧದಲ್ಲೂ ಬದಲಾವಣೆಯಾಗುತ್ತದೆ.

ತೂಕ ಇಳಿದ ನಂತ್ರ ವ್ಯಕ್ತಿ ಮಾನಸಿಕವಾಗಿ ಬಲಗೊಳ್ತಾನೆ. ಮೊದಲಿಗಿಂತ ಹೆಚ್ಚು ನೆಮ್ಮದಿ, ಖುಷಿ ಕಾಣ್ತಾನೆ. ಇದು ಬಹುತೇಕರು ಸಂಗಾತಿ ಬದಲಿಸಲು ಕಾರಣವಾದ್ರೆ ಮತ್ತೆ ಕೆಲವರ ಸಂಬಂಧ ಗಟ್ಟಿಯಾಗಲು ಕಾರಣವಾಗುತ್ತದೆ. ಬೆರಳೆಣಿಕೆಯಷ್ಟು ಮಂದಿ ಸಂಬಂಧ ಬಲಗೊಳ್ಳುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ತೂಕ ಇಳಿದ ಮೇಲೆ ದೇಹದ ಅಪೇಕ್ಷೆ ಕೂಡ ಬದಲಾಗುತ್ತದೆ. ಇದೇ ಸಂಗಾತಿ ಬದಲಿಸಲು ಕಾರಣವಾಗಬಹುದು. ಆದ್ರೆ ಸ್ವೀಡನ್ ನಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ನೋಡ ಸಿಗ್ತಿದೆ. ಹಾಗಂತ ಬೇರೆ ದೇಶದಲ್ಲೂ ಇದೇ ಆಗ್ತಿದೆ ಎನ್ನಲು ಸಾಧ್ಯವಿಲ್ಲವೆಂದು ಸಂಶೋಧಕರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...