alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಗಲ್ ಡಾಲರ್ ಗೆ ಲಕ್ಷ ಲಕ್ಷ ಕೊಡ್ತಿರೋದೇಕೆ ಇರಾನಿಯರು…!

ಅಮೆರಿಕಾದ ಡಾಲರ್ ವಿರುದ್ಧ ಇರಾನ್ ಕರೆನ್ಸಿ ರಿಯಾಲ್ ದಿನೇ ದಿನೇ ಪಾತಾಳಕ್ಕೆ ಕುಸಿಯುತ್ತಿದೆ. ಸೋಮವಾರದ ಅಂತ್ಯಕ್ಕೆ ಡಾಲರ್ ವಿರುದ್ಧ ರಿಯಾಲ್ ಮೌಲ್ಯ 1ಲಕ್ಷದ 12ಸಾವಿರ ರಿಯಾಲ್ ನಷ್ಟು ಹೆಚ್ಚಳವಾಗಿದೆ. ಕುಸಿಯುತ್ತಿರುವ ಇರಾನ್ ಆರ್ಥಿಕತೆಯ ಪ್ರಭಾವದಿಂದಾಗಿ ಇರಾನ್ ಕರೆನ್ಸಿ ಡಾಲರ್ ಎದುರು ತನ್ನ ಮೌಲ್ಯ ಕಳೆದುಕೊಳ್ತಿದೆ.

ಇರಾನ್ ಮೇಲೆ ಅಮೆರಿಕಾ ಆರ್ಥಿಕ ದಿಗ್ಬಂಧನ ವಿಧಿಸಿದ ಪರಿಣಾಮ ರಿಯಾಲ್ ಅಪಮೌಲ್ಯಕ್ಕೀಡಾಗಿದೆ. ಇರಾನ್ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ. ಯಾಕಂದ್ರೆ ಅಮೆರಿಕ ವಿಶ್ವ ಸಮುದಾಯದೊಂದಿಗೆ ತೈಲ ವ್ಯಾಪಾರವನ್ನ ನಿಲ್ಲಿಸುವಂತೆ ತಾಕೀತು ಮಾಡಿದೆ. ಏಪ್ರಿಲ್ ನಿಂದಲೇ ತನ್ನ ದೇಶದ ಕರೆನ್ಸಿ ಕುಸಿತದ ಪರಿಣಾಮವನ್ನು ಇರಾನ್ ನೋಡ್ತಾನೆ ಬಂದಿದೆ. ಪ್ರತಿ ಡಾಲರ್ ಬೆಲೆಯನ್ನ 42,000 ರಿಯಾಲ್ ಗಳಿಗೆ ಸರ್ಕಾರ ಫಿಕ್ಸ್ ಮಾಡೋಕೆ ಪ್ರಯತ್ನಿಸಿದ್ರು ಅದ್ರಲ್ಲಿ ಯಶಸ್ವಿಯಾಗಲಿಲ್ಲ.

ಅಮೆರಿಕಾದ ಆರ್ಥಿಕ ದಿಗ್ಬಂಧನ ಒಂದು ಕಡೆಯಾದ್ರೆ ಬ್ಯಾಂಕ್ ಗಳ ಸಮಸ್ಯೆಗಳು ಕೂಡ ಇರಾನನ್ನು ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯುತ್ತಿವೆ. ಇರಾನ್ ಅಧ್ಯಕ್ಷ ಹಸನ್ ರುಹಾನಿ ಸೆಂಟ್ರಲ್ ಬ್ಯಾಂಕ್ ನ ಅಧ್ಯಕ್ಷರನ್ನು ಬದಲಿಸುವ ನಿರ್ಧಾರ ಕೈಗೊಂಡಿದ್ದಾಗ್ಯೂ ಇರಾನ್ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯುತ್ತಿದೆ. 1979ರ ವೇಳೆಗೆ ಪ್ರತಿ ಡಾಲರ್ ವಿರುದ್ಧ ರಿಯಾಲ್ ಮೌಲ್ಯ 70 ರಷ್ಟಿತ್ತು. 2013 ರಲ್ಲಿ ಪ್ರತಿ ಡಾಲರ್ ಗೆ 36,000 ರಿಯಾಲ್ ಗಳಷ್ಟು ಹೆಚ್ಚಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...