alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೆ ಹರಿದಿರುವ ಬಟ್ಟೆಯನ್ನು ಚೀನಾ ಮಕ್ಕಳು ಯಾಕೆ ಹಾಕ್ತಾರೆ ಗೊತ್ತಾ?

ಹರಿದ ಜೀನ್ಸ್ ಈಗ ಫ್ಯಾಷನ್. ಆದ್ರೆ ಹಿಂದಿನ ಖಾಸಗಿ ಅಂಗ ಕಾಣುವಂತಹ ಪ್ಯಾಂಟ್ ತೊಟ್ಟರೆ ಎಲ್ಲರೂ ನಿಬ್ಬೆರಗಾಗಿ ನೋಡ್ತಾರೆ. ದೊಡ್ಡವರಿರಲಿ ಚಿಕ್ಕವರು ಇಂಥ ಪ್ಯಾಂಟ್ ಧರಿಸಿದ್ರೂ ಭಾರತೀಯರಲ್ಲಿ ನಾನಾ ಪ್ರಶ್ನೆ ಕಾಡುತ್ತದೆ. ಆದ್ರೆ ಚೀನಾದಲ್ಲಿ ಇದು ಮಾಮೂಲಿ.

ಚೀನಾದಲ್ಲಿ ಮಕ್ಕಳಿಗೆ ಸಾಂಪ್ರದಾಯಿಕ ಉಡುಗೆ ತೊಡಿಸಲಾಗುತ್ತದೆ. ಕಹಿ ಡಾಂಗ್ ಕು ಹೆಸರಿನ ಈ ಡ್ರೆಸ್ ನ ಹಿಂಬದಿ ಭಾಗ ಹರಿದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಇಂಥ ಡ್ರೆಸ್ ತೊಡಿಸುವವರ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಸಂಪ್ರದಾಯ ಪಾಲಿಸುವವರೂ ಚೀನಾದಲ್ಲಿದ್ದಾರೆ.

ಇಂಥ ಬಟ್ಟೆ ತೊಟ್ಟ ಮಕ್ಕಳು ಬಹುಬೇಗ ವಾಷ್ ರೂಂ ಬಳಸುವುದನ್ನು ಕಲಿಯುತ್ತಾರಂತೆ. ಡೈಪರ್ ಹಾಕಿಕೊಳ್ಳುವ ಮಕ್ಕಳು ನಿಧಾನವಾಗಿ ವಾಷ್ ರೂಂಗೆ ಹೋಗ್ತಾರೆ ಎನ್ನುತ್ತಾರೆ ಇಲ್ಲಿನವರು. ಇಲ್ಲಿನ 4-5 ತಿಂಗಳ ಮಕ್ಕಳಿಗೆ ಈ ಬಟ್ಟೆ ಹಾಕಲಾಗುತ್ತದೆ. ಈ ಬಟ್ಟೆಯ ಅನಾನುಕೂಲವೆಂದ್ರೆ ಮಕ್ಕಳು ಕಂಡ ಕಂಡಲ್ಲಿ ಮಲವಿಸರ್ಜನೆ ಮಾಡ್ತಾರೆ. ಇದ್ರಿಂದಾಗಿ ಚೀನಾದ ಗ್ರಾಮಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಟ್ಟೆ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಇಂಥ ಬಟ್ಟೆಯಿಂದ ಪರಿಸರ ಹಾಳಾಗುತ್ತಿದೆ. ಹಾಗಾಗಿ ಡೈಪರ್ ಬಳಸಿ ಎಂಬ ಸಲಹೆ ಕೇಳಿ ಬರ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...