alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದೀರಿ? ಈ ಪ್ರಶ್ನೆ ಕೇಳಿದ್ರೆ ಜೈಲೂಟ ಗ್ಯಾರಂಟಿ

ಚುನಾವಣಾ ಮತದಾನ ಮುಗಿಯುತ್ತಿದ್ದಂತೆ ಯಾರಿಗೆ ವೋಟ್ ನೀಡಿದ್ದೀರಿ ಎಂದು ಪ್ರಶ್ನೆ ಕೇಳೋದು ಸಾಮಾನ್ಯ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಸಾಮಾನ್ಯ ಪ್ರಶ್ನೆ, ನಿಮ್ಮನ್ನು ಜೈಲುಪಾಲು ಮಾಡುತ್ತದೆ. ಇಲ್ಲವೆ 1 ಲಕ್ಷ ರೂಪಾಯಿ ದಂಡ ನೀಡಬೇಕಾಗುತ್ತದೆ. ನಿಮ್ಮ ಅದೃಷ್ಟ ಕೆಟ್ಟಿದ್ದರೆ ಜೈಲಿನ ಜೊತೆ ದಂಡ ಕೂಡ ನೀಡಬೇಕಾಗುತ್ತದೆ.

ಪಾಕಿಸ್ತಾನ ಚುನಾವಣಾ ಆಯೋಗದ ಅಧಿಸೂಚನೆಯಲ್ಲಿ ಅನೇಕ ಕೆಲಸಗಳಿಗೆ ನಿರ್ಬಂಧ ಹೇರಿದೆ. ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಶಿಕ್ಷೆ ಎದುರಿಸಬೇಕಾಗುತ್ತದೆ. ಯಾರಿಗೆ ಮತ ನೀಡಿದ್ದೀರಿ ಎಂಬ ಪ್ರಶ್ನೆ ಜೊತೆಗೆ ಬ್ಯಾಲೆಟ್ ಪೇಪರ್ ಫೋಟೋ ತೆಗೆಯುವುದು ಕೂಡ ಅಪರಾಧ.

ಮತದಾನ ಕೇಂದ್ರಿಂದ ಮತದಾರರನ್ನು ಓಡಿಸುವುದು, ಮತದಾರರಿಗೆ ಬೆದರಿಕೆ ಹಾಕುವುದು, ಮತದಾರರನ್ನು ಅಪಹರಿಸುವುದು ಸೇರಿದಂತೆ ಅನೇಕ ವಿಚಾರಗಳು ಅಪರಾಧವೆಂದು ಚುನಾವಣಾ ಆಯೋಗ ಹೇಳಿದೆ. ಜಿಲ್ಲಾ ಚುನಾವಣಾ ಅಧಿಕಾರಿಗಳು ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ದಂಡ ಅಥವಾ ಜೈಲು ಶಿಕ್ಷೆ ಜೊತೆಗೆ ದಂಡವನ್ನು ವಿಧಿಸಬಹುದು ಎಂದು ಆಯೋಗ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...