alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ 3 ನೇ ಮದುವೆಯಾಗ್ತಿರುವ ಪಿಂಕಿ ಯಾರು ಗೊತ್ತಾ?

ಮದ್ಯದ ದೊರೆ ವಿಜಯ್ ಮಲ್ಯ 62ನೇ ವಯಸ್ಸಿನಲ್ಲಿ ಪಿಂಕಿ ಲಾಲ್ವಾನಿ ಜೊತೆ ಮೂರನೇ ಮದುವೆಯಾಗ್ತಿದ್ದಾನೆ. ಮಾಧ್ಯಮಗಳ ವರದಿ ಪ್ರಕಾರ ಮಲ್ಯ ಕಳೆದ ಮೂರು ವರ್ಷಗಳಿಂದ ಪಿಂಕಿ ಜೊತೆ ಲಿವ್ ಇನ್ ನಲ್ಲಿದ್ದಾನೆ. ಅನೇಕ ಕಾರ್ಯಕ್ರಮಗಳಲ್ಲಿಯೂ ಪಿಂಕಿ ಮಲ್ಯ ಜೊತೆ ಕಾಣಿಸಿಕೊಂಡಿದ್ದಾಳೆ.

ಮೂಲಗಳ ಪ್ರಕಾರ ಇಬ್ಬರೂ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ. ಆದ್ರೆ ಎರಡೂ ಕಡೆಯ ಅಧಿಕೃತ ಮೂಲಗಳು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಇತ್ತೀಚಿಗಷ್ಟೇ ಮಲ್ಯ ಪಿಂಕಿ ಕುಟುಂಬಸ್ಥರನ್ನು ಭೇಟಿಯಾಗಿದ್ದನಂತೆ. ಮಲ್ಯ ಹಾಗೂ ಪಿಂಕಿ ಕುಟುಂಬಸ್ಥರ ಮಧ್ಯೆ ಒಳ್ಳೆ ಸಂಬಂಧವಿದೆಯಂತೆ. ಪಿಂಕಿ ನಿರ್ಧಾರಕ್ಕೆ ಕುಟುಂಬಸ್ಥರು ಯಸ್ ಎಂದಿದ್ದಾರೆ ಎನ್ನಲಾಗಿದೆ.

ಪಿಂಕಿ ಮಲ್ಯಗಿಂತ ತುಂಬಾ ಚಿಕ್ಕವಳು. ಪಿಂಕಿ 2011ರಲ್ಲಿ ಕಿಂಗ್ ಫಿಶರ್ ನಲ್ಲಿ ಗಗನ ಸಖಿಯಾಗಿ ಕೆಲಸಕ್ಕೆ ಸೇರಿದ್ದಳು. ನಂತ್ರ ಪಿಂಕಿ ಹಾಗೂ ಮಲ್ಯ ಹತ್ತಿರವಾದ್ರು ಎನ್ನಲಾಗಿದೆ. ನಂತ್ರ ಪಿಂಕಿ, ಕಿಂಗ್ ಫಿಶರ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಳು. ಕಿಂಗ್ ಫಿಶರ್ ಕ್ಯಾಲೆಂಡರ್ ಗಾಗಿ ಫೋಟೋಶೂಟ್ ಮಾಡಿದ್ದಳು.

2016ರಲ್ಲಿ ಭಾರತೀಯ ಬ್ಯಾಂಕ್ ಗಳಿಗೆ ಮೋಸ ಮಾಡಿ ಮಲ್ಯ ಲಂಡನ್ ಗೆ ಹಾರಿದ್ದ. ಈ ವೇಳೆ ಪಿಂಕಿ ಕೂಡ ಮಲ್ಯ ಜೊತೆಗಿದ್ದಳು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...