alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ಕಚೇರಿಯಲ್ಲಿನ ಗುಂಡಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರೋ ಯುಟ್ಯೂಬ್ ಮುಖ್ಯ ಕಚೇರಿಯಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆಯನ್ನು ನಸೀಮ್ ಅಗ್ಧಮ್ ಎಂದು ಗುರುತಿಸಲಾಗಿದೆ. 9mm ಹ್ಯಾಂಡ್ ಗನ್ ತೆಗೆದುಕೊಂಡು ಬಂದಿದ್ದ ಈ ಮಹಿಳೆ ಏಕಾಏಕಿ ಗುಂಡು ಹಾರಿಸಿದ್ದಾಳೆ.

ಈ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಕೌಟುಂಬಿಕ ಕಲಹವೇ ಇದಕ್ಕೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ. ಯಾಕಂದ್ರೆ ಗುಂಡೇಟು ತಿಂದವರಲ್ಲಿ ಓರ್ವ ಆಕೆಯ ಪ್ರಿಯಕರ. ಅವನನ್ನು ಗುರಿಯಾಗಿಸಿಕೊಂಡು ನಸೀಮ್ ಈ ದಾಳಿ ನಡೆಸಿದ್ದಾಳೆ.

39 ವರ್ಷದ ನಸೀಮ್ ಕ್ಯಾಲಿಫೋರ್ನಿಯಾದವಳು. ಯುಟ್ಯೂಬ್ ಕಂಪನಿಗೂ, ಅವಳಿಗೂ ಯಾವುದೇ ಸಂಬಂಧವಿಲ್ಲ. ಕಣ್ಣಿಗೆ ಕನ್ನಡಕ ಧರಿಸಿ, ಸ್ಕಾರ್ಫ್ ನಿಂದ ಮುಖ ಮುಚ್ಚಿಕೊಂಡು ಆಕೆ ಯುಟ್ಯೂಬ್ ಕಚೇರಿಗೆ ಎಂಟ್ರಿ ಕೊಟ್ಟಿದ್ದಳು.

ಆದ್ರೆ ಆರೋಪಿ ನಸೀಮ್ ಳ ತಂದೆ ಹೇಳ್ತಿರೋದೇ ಬೇರೆ. ಆಕೆಯ ವಿಡಿಯೋಗಳಿಗೆ ಹಣ ನೀಡುವುದನ್ನು ಯುಟ್ಯೂಬ್ ನಿಲ್ಲಿಸಿಬಿಟ್ಟಿತ್ತಂತೆ. ಇದರಿಂದ ಕೆರಳಿ ನಸೀಮ್ ಗುಂಡಿನ ದಾಳಿ ನಡೆಸಿದ್ದಾಳೆ ಅಂತಾ ಅವಳ ತಂದೆ ಹೇಳುತ್ತಿದ್ದಾನೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆಕೆ ತನಗೆ ತಾನೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...