alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಗೇಮ್ ಆಡ್ತೀರಾ? ಹಾಗಿದ್ರೆ ಇಲ್ಲಿದೆ ಶಾಕಿಂಗ್ ಸುದ್ದಿ

ವಿಡಿಯೋ ಗೇಮ್ ಆಡ್ಬೇಡ ಎಂದು ಪಾಲಕರು ಎಷ್ಟು ಕಿರುಚಿದ್ರೂ ಮಕ್ಕಳ ಕಿವಿಗೆ ಇದು ಹೋಗೋದಿಲ್ಲ. ಮಕ್ಕಳು ಪಾಲಕರು ಹೇಳಿದ ಮಾತನ್ನು ನಿರ್ಲಕ್ಷ್ಯಿಸಿ ವಿಡಿಯೋ ಗೇಮ್ ಮುಂದೆ ಗಂಟೆ ಸಮಯ ಕಳೆಯುತ್ತಾರೆ. ಹೊರಗೆ ಮೈದಾನದಲ್ಲಿ ಆಡಿದ್ರೆ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಸುಧಾರಿಸುತ್ತದೆ. ವಿಡಿಯೋ ಗೇಮ್ ಆರೋಗ್ಯವನ್ನು ಹಾಳು ಮಾಡುತ್ತದೆ.

ಇದು ಹೊಸ ಸಂಗತಿಯಲ್ಲ. ವಿಡಿಯೋ ಗೇಮ್ ಮಕ್ಕಳ ಆರೋಗ್ಯ ಹಾಳು ಮಾಡುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲ ಪಾಲಕರಿಗೂ ಗೊತ್ತು. ಈಗ ವಿಶ್ವ ಆರೋಗ್ಯ ಸಂಸ್ಥೆ ವಿಡಿಯೋ ಗೇಮ್ ಚಟವನ್ನು ಮಾನಸಿಕ ಅಸ್ವಸ್ಥತೆ ಎಂದು ಘೋಷಣೆ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ ತನ್ನ ಇಂಟರ್ನ್ಯಾಷನಲ್ ಕ್ಲಾಸಿಫಿಕೇಷನ್ ಆಫ್ ಡಿಸೀಸ್ ನಲ್ಲಿ ವಿಡಿಯೋ ಗೇಮನ್ನು ಮಾನಸಿಕ ಅಸ್ವಸ್ಥತೆ ಎಂದಿದೆ. ಇಂಟರ್ನ್ಯಾಷನಲ್ ಕ್ಲಾಸಿಫಿಕೇಷನ್ ಆಫ್ ಡಿಸೀಸ್ (ಐಸಿಡಿ) ವಿಶ್ವ ಆರೋಗ್ಯ ಸಂಸ್ಥೆಯ ಕೈಪಿಡಿಯಾಗಿದೆ. ಕಳೆದ 10 ವರ್ಷಗಳಿಂದ ಇದನ್ನು ನವೀಕರಿಸಲಾಗುತ್ತಿದೆ.

ಗಾಯಗಳು, ರೋಗಗಳು, ಸಾವಿಗೆ ಕಾರಣಗಳು ಸೇರಿದಂತೆ 55,000 ಅನನ್ಯ ಸಂಕೇತಗಳು ಇದ್ರಲ್ಲಿವೆ. 2019ರಲ್ಲಿ ನಡೆಯುವ ವಿಶ್ವ ಆರೋಗ್ಯ ಸಮ್ಮೇಳನದಲ್ಲಿ ಕೈಪಿಡಿಯನ್ನು ಪ್ರಸ್ತಾಪಿಸಲಾಗುವುದು. ಜನವರಿ 2022 ರ ನಂತ್ರ ಇದು ಜಾರಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...