alex Certify
ಕನ್ನಡ ದುನಿಯಾ       Mobile App
       

Kannada Duniya

ಗುರುತೇ ಸಿಗದಷ್ಟು ಬದಲಾಗಿದ್ದಾಳೆ ಈಕೆ…..

ಮಾರ್ಟಿಬಾ ಬಿಗ್ ಜರ್ಮನಿಯ ಮಾಜಿ ಗಗನಸಖಿ. ಯುರೋಪ್ ನಲ್ಲೇ ಅತಿ ದೊಡ್ಡ ಸ್ತನಗಳನ್ನು ಹೊಂದಬೇಕು ಅನ್ನೋ ಪ್ರಯತ್ನದಲ್ಲಿ ಬೆಳ್ಳಗಿದ್ದ ಈ ಸುಂದರಿ ಈಗ ಗುರುತೇ ಸಿಗದಷ್ಟು ಬದಲಾಗಿದ್ದಾಳೆ. ಸ್ತನಗಳ ವಿಸ್ತರಣೆಗಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರೋ ಮಾರ್ಟಿನಾ ಅದಕ್ಕಾಗಿಯೇ ಸುಮಾರು 44 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.

ಅಮೆರಿಕದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆಗೆ ಮಾರ್ಟಿನಾ ಒಳಗಾಗಿದ್ದಾಳೆ. ಅಷ್ಟೇ ಅಲ್ಲ ತಾನು ಕಪ್ಪು ಬಣ್ಣವನ್ನು ಹೊಂದಬೇಕೆಂದು ಮೇಲಿಂದ ಮೇಲೆ ಮೆಲಾನಿನ್ ಇಂಜೆಕ್ಷನ್ ಕೂಡ ತೆಗೆದುಕೊಂಡಿದ್ದಳು. ಈಗ ಪೂರ್ತಿ ಕಪ್ಪುಬಣ್ಣದವಳಾಗಿರುವ ಮಾರ್ಟಿನಾಗೆ ಆಫ್ರಿಕಾಗೆ ಹೋಗಬೇಕೆಂಬ ಆಸೆ.

ಆಫ್ರಿಕಾದ ರುಚಿಕರ ಖಾದ್ಯಗಳನ್ನು ಸವಿಯಲು ತುದಿಗಾಲಲ್ಲಿದ್ದಾಳೆ. ಅಷ್ಟೇ ಅಲ್ಲ ಕಪ್ಪು ವರ್ಣದವಳಾಗಿ ಬದಲಾಗಿರುವುದು ಅವಳಿಗೆ ಖುಷಿ ಕೊಟ್ಟಿದೆಯಂತೆ. ಚರ್ಮದ ಬಣ್ಣ ಬೆಳ್ಳಗಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎನ್ನುತ್ತಾಳೆ ಮಾರ್ಟಿನಾ. ಬಾರ್ಬಿ ಡಾಲ್ ನಂತೆ ಕಾಣಲು 2012ರಲ್ಲಿ ಮೊದಲ ಬಾರಿ ಈಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು.

2011ರಲ್ಲಿ ನಡೆದ ಅಪಘಾತವೊಂದರಲ್ಲಿ ಆಕೆಯ ತಾಯಿ ಮತ್ತು ಸಹೋದರಿ ಮೃತಪಟ್ಟಿದ್ದಾರೆ. ಪ್ರಿಯಕರ ಮೈಖೆಲ್, ಮಾರ್ಟಿನಾಗೆ ಬೆಂಬಲವಾಗಿ ನಿಂತಿದ್ದಾನಂತೆ. ಆತನೂ ಕಪ್ಪಗಾಗಲು ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದಾನಂತೆ. ಸುಮಾರು 7 ವರ್ಷ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.

ಸ್ತನಗಳ ತೂಕವನ್ನು 2000 ಗ್ರಾಂಗೆ ಹೆಚ್ಚಿಸಿಕೊಳ್ಳೋದಾಗಿ ಮಾರ್ಟಿನಾ ಹೇಳಿದ್ದಳು. ಹಾಗಾದ್ರೆ ಕೆಲಸ ಬಿಡಬೇಕೆಂದು ವಿಮಾನಯಾನ ಸಂಸ್ಥೆ ಸೂಚಿಸಿತ್ತು. ಈಗ ಆಕೆಯ ಸ್ತನಗಳ ಭಾರ ಕಡಿಮೆ ಅಂದ್ರೂ 12 ಕೆಜಿ ಇದೆ. ಆ ಭಾರವನ್ನು ಹೊರಲು ಮಾರ್ಟಿನಾ ತರಬೇತಿ ಕೂಡ ಪಡೆದಿದ್ದಾಳೆ. ಇದರಲ್ಲೇ ಗಿನ್ನಿಸ್ ದಾಖಲೆ ಮಾಡುವ ಕನಸು ಕಾಣ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...