alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪನ ವಿದಾಯ ಭಾಷಣಕ್ಕೆ ಬರಲಿಲ್ಲ ಸಾಶಾ ಒಬಾಮಾ

sasha-obama_650x400_41470493236

ಬರಾಕ್ ಒಬಾಮಾ ಅವರ ವಿದಾಯ ಭಾಷಣ ಭಾವನಾತ್ಮಕ ಕ್ಷಣವಾಗಿತ್ತು. ಮಾತನಾಡ್ತಾ ಮಾತನಾಡ್ತಾ ಭಾವುಕರಾದ ಒಬಾಮಾ ಕಣ್ಣೀರು ಹಾಕುತ್ತಲೇ ತಮ್ಮ ಪತ್ನಿ ಮಿಶೆಲ್ ಹಾಗೂ ಪುತ್ರಿಯರಾದ ಸಾಶಾ ಮತ್ತು ಮಲಿಯಾಗೆ ಧನ್ಯವಾದ ಹೇಳಿದ್ರು. ವಿಚಿತ್ರ ಸನ್ನಿವೇಶಗಳಲ್ಲೂ ಅದ್ಭುತ ಸ್ತ್ರೀಯಾಗಿ ರೂಪುಗೊಂಡಿದ್ದೀರಾ, ನಿಮ್ಮಲ್ಲಿ ಬುದ್ಧಿವಂತಿಕೆ ಇದೆ, ಸೌಂದರ್ಯವಿದೆ, ನಯ-ವಿನಯ, ಚಿಂತನಶೀಲ ಮತ್ತು ಉತ್ಸಾಹವಿದೆ ಅಂತಾ ಒಬಾಮಾ ಪುತ್ರಿಯರನ್ನು ಹಾಡಿ ಹೊಗಳಿದ್ರು.

ನಿಮ್ಮ ತಂದೆ ಎನಿಸಿಕೊಳ್ಳಲು ಹೆಮ್ಮೆ ಎನಿಸುತ್ತಿದೆ ಅಂತಾ ಒಬಾಮಾ ಮಕ್ಕಳ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ರು. ವಿದಾಯ ಭಾಷಣದ ವೇಳೆ ಕುಟುಂಬ ಸದಸ್ಯರು ಕೂಡ ವೇದಿಕೆಗೆ ಆಗಮಿಸಿ ಒಬಾಮಾಗೆ ಜೊತೆಯಾಗಿದ್ರು. ಆದ್ರೆ ಈ ಕಾರ್ಯಕ್ರಮದಲ್ಲಿ ಒಬಾಮಾರ ಕಿರಿಯ ಪುತ್ರಿ ಸಾಶಾ ಹಾಜರಿರಲಿಲ್ಲ.

ಅಪ್ಪನ ವಿದಾಯ ಭಾಷಣದ ಸಂದರ್ಭದಲ್ಲಿ ಸಾಶಾ ಒಬಾಮಾ ಯಾಕೆ ಬಂದಿಲ್ಲ ಅನ್ನೋ ಪ್ರಶ್ನೆ ಸಾಮಾಜಿಕ ತಾಣಗಳಲ್ಲೂ ಉದ್ಭವವಾಗಿದೆ. ಅದಕ್ಕೆ ಉತ್ತರ ಕೂಡ ದೊರೆತಿದೆ. ಆ ದಿನ ಬೆಳಗ್ಗೆ ಸಾಶಾ ಒಬಾಮಾಗೆ ಶಾಲೆಯಲ್ಲಿ ಪರೀಕ್ಷೆ ಇತ್ತು. ಹಾಗಾಗಿ ಕುಟುಂಬದವರೆಲ್ಲ ಚಿಕಾಗೋಗೆ ಪ್ರಯಾಣ ಬೆಳೆಸಿದ್ರೆ, ಸಾಶಾ ವಾಷಿಂಗ್ಟನ್ ಡಿಸಿಯಲ್ಲೇ ಉಳಿದುಕೊಳ್ಳಬೇಕಾಯ್ತು.

15 ವರ್ಷದ ಸಾಶಾ ‘ಸಿಡ್ವೆಲ್ ಫ್ರೆಂಡ್ಸ್’ ಶಾಲೆಯಲ್ಲಿ ಓದುತ್ತಿದ್ದಾಳೆ. ಪ್ರಯಾಣದ ಕಾರಣ ಕೊಟ್ಟು ಪರೀಕ್ಷೆಯಿಂದ ತಪ್ಪಿಸಿಕೊಳ್ಳುವಂತಿಲ್ಲ ಅಂತಾ ಶಾಲಾ ಆಡಳಿತ ಮಂಡಳಿ ಸ್ಟ್ರಿಕ್ಟ್ ಆಗಿ ಹೇಳಿತ್ತು. ಅದೇ ಕಾರಣಕ್ಕೋ ಏನೋ ಸಾಶಾ ತಂದೆಯ ವಿದಾಯ ಭಾಷಣವನ್ನೇ ಮಿಸ್ ಮಾಡಿಕೊಂಡಿದ್ದಾಳೆ. ಒಬಾಮಾರ ವಿದಾಯ ಭಾಷಣ ಸಾಶಾ ಜೀವನ ಅತ್ಯಂತ ಅಮೂಲ್ಯ ಕ್ಷಣವಾಗಿತ್ತು, ಅದನ್ನು ಪರಿಗಣಿಸಿ ಶಾಲಾ ಆಡಳಿತ ಮಂಡಳಿ ವಿನಾಯಿತಿ ನೀಡಬಹುದಿತ್ತು ಅನ್ನೋದು ಹಲವರ ಅಭಿಪ್ರಾಯ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...