alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಪ್ರಾಣವುಳಿಸಿದ್ದು ಪಿಜ್ಜಾ ಅಂದ್ರೇ ನೀವು ನಂಬಲೇಬೇಕು

pizza van47 ವರ್ಷದ ವ್ಯಕ್ತಿಯೊಬ್ಬ ಡೊಮಿನೋಸ್ ಪಿಜ್ಜಾ ಕಾರಣಕ್ಕಾಗಿ ತನ್ನ ಪ್ರಾಣವುಳಿಸಿಕೊಂಡಿದ್ದಾನೆ. ಇದು ಅಚ್ಚರಿಯಾದರೂ ಸತ್ಯ ಸಂಗತಿ. ಪ್ರತಿ ದಿನ ಪಿಜ್ಜಾ ಆರ್ಡರ್ ಮಾಡುತ್ತಿದ್ದ ಈತ ಸತತ 11 ದಿನಗಳ ಕಾಲ ಆರ್ಡರ್ ಮಾಡದ ಕಾರಣಕ್ಕಾಗಿ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ.

ಈ ಘಟನೆ ನಡೆದಿರುವುದು ಅಮೆರಿಕಾದಲ್ಲಿ. ಅಲೆಕ್ಸಾಂಡರ್ ಎಂಬಾತ 2009 ರಿಂದಲೂ ಪ್ರತಿ ದಿನ ಆನ್ ಲೈನ್ ಮೂಲಕ ಡೊಮಿನೋಸ್ ಪಿಜ್ಜಾ ಆರ್ಡರ್ ಮಾಡುತ್ತಿದ್ದ. ಅಲೆಕ್ಸಾಂಡರ್ ರೆಗ್ಯುಲರ್ ಕಸ್ಟಮರ್ ಆಗಿದ್ದ ಕಾರಣ ಡೊಮಿನೋಸ್ ಪಿಜ್ಜಾ ಸಿಬ್ಬಂದಿಗಳಿಗೆಲ್ಲಾ ಚಿರಪರಿಚಿತನಾಗಿದ್ದ.

ಒಬ್ಬಂಟಿಯಾಗಿದ್ದ ಈತ ರೆಸ್ಟೋರೆಂಟ್ ಗೆ ಬಾರದಿದ್ದರೂ ಆತನ ಆರ್ಡರ್ ಆನ್ ಲೈನ್ ನಲ್ಲಿ ಪ್ರತಿದಿನವೂ ಬರುತ್ತಿದ್ದ ಕಾರಣ ಸಿಬ್ಬಂದಿಗಳಿಗೆ ಆತನ ಬಗ್ಗೆ ಗೊತ್ತಿತ್ತು. ಇತ್ತೀಚೆಗೆ ಸತತ 11 ದಿನಗಳಾದರೂ ಅಲೆಕ್ಸಾಂಡರ್ ಪಿಜ್ಜಾ ಆರ್ಡರ್ ಮಾಡದ ಕಾರಣ ಮೇಲ್ವಿಚಾರಕಿ, ಡೆಲಿವರಿ ಸಿಬ್ಬಂದಿಗೆ ಆತನ ಮನೆಗೆ ಹೋಗಿ ನೋಡಲು ಹೇಳಿದ್ದಾರೆ.

ಸಿಬ್ಬಂದಿ, ಅಲೆಕ್ಸಾಂಡರ್ ಮನೆಗೆ ಹೋಗಿ ಬೆಲ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮಾನಗೊಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಅವರು ಬಂದು ನೋಡಿದ ವೇಳೆ ಅನಾರೋಗ್ಯದಿಂದ ಅಲೆಕ್ಸಾಂಡರ್ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...