alex Certify
ಕನ್ನಡ ದುನಿಯಾ       Mobile App
       

Kannada Duniya

ಹಸುವಿನ ಕೆಚ್ಚಲಿಗೆ ಪತ್ನಿಯ ಬ್ರಾ ತೊಡಿಸಿದ ಭೂಪ…!

ಕರುವೊಂದು ತನ್ನ ತಾಯಿಯ ಹಾಲು ಕುಡಿಯಲು ಮುಂದಾಗದಿದ್ದಕ್ಕೆ ಬ್ರಿಟನ್ ನ ಈ ರೈತ ಭಾರೀ ಉಪಾಯವೊಂದನ್ನು ಮಾಡಿದ್ದಾನೆ. ಹಸುವಿಗೆ ತನ್ನ ಪತ್ನಿಯ ಬ್ರಾ ಹಾಕಿದ್ದು, ಅಚ್ಚರಿಯೆಂಬಂತೆ ಬಳಿಕ ಕರು ಹಾಲು ಕುಡಿಯಲು ಆರಂಭಿಸಿದೆಯಂತೆ.

ಕರು ಹಾಲು ಕುಡಿಯದ ಕಾರಣ ಏನು ಮಾಡಬೇಕೆಂಬ ಚಿಂತೆಯಲ್ಲಿದ್ದ ಈ ರೈತನಿಗೆ ಬಳಿಕ ಈ ಉಪಾಯ ಹೊಳೆದಿದೆ. ತನ್ನ ಪತ್ನಿಯ ಹಳೆ ಬ್ರಾ ತೆಗೆದುಕೊಂಡ ದಾರದ ಸಹಾಯದಿಂದ ಹಸುವಿನ ಕೆಚ್ಚಲಿಗೆ ತೊಡಿಸಿದ್ದಾನೆ. ನಂತರದಲ್ಲಿ ಕರು ಹಾಲು ಕುಡಿಯಲು ಆರಂಭಿಸಿದ್ದು, ತನ್ನ ಪ್ಲಾನ್ ಯಶಸ್ವಿಯಾಗಿದ್ದಕ್ಕೆ ಹೆಮ್ಮೆಪಟ್ಟಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದ್ದು, ರೈತನ ಈ ಉಪಾಯಕ್ಕೆ ತರಹೇವಾರಿ ಕಮೆಂಟ್ ಗಳು ಕೇಳಿ ಬರುತ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...