alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ 11 ವರ್ಷ ಹಿಂದಿನ ಫೋಟೋ ನೋಡಿ ಆಶ್ಚರ್ಯಕ್ಕೊಳಗಾದ ಪತಿ…!

ಚೀನಾದಿಂದ ಕುತೂಹಲಕಾರಿ ಘಟನೆಯೊಂದು ನಡೆದಿದೆ. ದಂಪತಿ ಸುದ್ದಿಯೊಂದು ಆಶ್ಚರ್ಯ ಹುಟ್ಟಿಸುವಂತಿದೆ. 11 ವರ್ಷಗಳ ಹಿಂದೆ ತೆಗೆದ ಪತ್ನಿ ಫೋಟೋ ಹಿಂದೆ ಪತಿ ಕಾಣಿಸಿಕೊಂಡಿದ್ದಾನೆ. ಆಗ ಇಬ್ಬರ ಮದುವೆಯಾಗಿರಲಿಲ್ಲ ಎಂಬುದು ವಿಶೇಷ.

ಚೀನಾದ ದಂಪತಿ ಯೇ ಹಾಗೂ ಝೂ ಇಬ್ಬರೂ ಹಳೆ ಫೋಟೋ ನೋಡ್ತಿದ್ದರು. 11 ವರ್ಷಗಳ ಹಿಂದೆ ತೆಗೆದ ಪತ್ನಿ ಫೋಟೋ ಹಿಂದೆ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾನೆ. ಕಿಂಗ್ಡಫ್ ನಲ್ಲಿ ಫೋಟೋ ತೆಗೆಯಲಾಗಿತ್ತು. ಫೋಟೋವನ್ನು ಹತ್ತಿರದಿಂದ ನೋಡಿದಾಗ ಫೋಟೋ ಹಿಂದಿದ್ದ ವ್ಯಕ್ತಿ ಯೇ ಎಂಬುದು ಗೊತ್ತಾಗಿದೆ. ಇದನ್ನು ನೋಡಿ ದಂಪತಿ ಆಶ್ಚರ್ಯಕ್ಕೊಳಗಾಗಿದ್ದಾರೆ.

ಮದುವೆಗೂ ಮುನ್ನ ಒಂದೇ ಸ್ಥಳದಲ್ಲಿ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದ ಜೋಡಿ ಮದುವೆ ನಂತ್ರ ಹನಿಮೂನ್ ಗೂ ಅಲ್ಲಿಗೆ ಹೋಗಿದ್ದರು. ಅದೇ ಸ್ಥಳದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋ ಈಗ ವೈರಲ್ ಆಗಿದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎಂಬ ಮಾತಿದೆ. ಈ ಜೋಡಿ ಮಧ್ಯೆ ನಡೆದ ಘಟನೆ ನೋಡಿದ್ರೆ ಇದು ಸತ್ಯ ಎನ್ನಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...