alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಬಾಲಕನ ಬೆಂಗಾವಲಿಗಿದ್ದರು 70 ಮಂದಿ ಪೊಲೀಸರು

ಅಮೆರಿಕಾದ ಈ ಬಾಲಕನ ಕಥೆ ನಿಜಕ್ಕೂ ಮನ ಕಲಕುವಂತಿದೆ. ಪೊಲೀಸ್ ಅಧಿಕಾರಿಯಾಗಿದ್ದ ಈ ಬಾಲಕನ ತಂದೆ, ಕರ್ತವ್ಯ ನಿರ್ವಹಿಸುವ ವೇಳೆ ಗುಂಡೇಟಿಗೆ ಬಲಿಯಾಗಿದ್ದು, ಬಳಿಕ ಮನೆಯಿಂದ ಹೊರಗೆ ಬರಲು ಅಂಜುತ್ತಿದ್ದ ಬಾಲಕನಿಗೆ ಸ್ಥೈರ್ಯ ತುಂಬಲು 70 ಮಂದಿ ಪೊಲೀಸ್ ಅಧಿಕಾರಿಗಳು ಬೆಂಗಾವಲಾಗಿದ್ದಾರೆ.

ಅಮೆರಿಕಾದ ಡಕೋಟಾದಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಬಾಲಕನ ತಂದೆ ಮೇ 4 ರಂದು ಕರ್ತವ್ಯನಿರತರಾಗಿದ್ದಾಗಲೇ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಇದರಿಂದ ಭೀತಿಗೊಂಡಿದ್ದ ಬಾಲಕ ಮನೆಯಿಂದ ಹೊರ ಬರಲು ಬೆಚ್ಚಿ ಬೀಳುತ್ತಿದ್ದ.

ಪತಿಯನ್ನು ಕಳೆದುಕೊಂಡು ಕಂಗಾಲಾಗಿದ್ದ ಬಾಲಕನ ತಾಯಿ, ಮಗನ ಈ ವರ್ತನೆಯಿಂದ ಮತ್ತಷ್ಟು ಆಘಾತಗೊಂಡಿದ್ದರು. ಈ ವಿಚಾರ ತಿಳಿದ ಮೃತ ಪೊಲೀಸ್ ಅಧಿಕಾರಿಯ ಸಹೋದ್ಯೋಗಿಗಳು ಬಾಲಕನಿಗೆ ಸ್ಥೈರ್ಯ ತುಂಬಲು ಮುಂದಾದರು. ತಂದೆ ಸಾವಿನ ಬಳಿಕ ಮೊದಲ ಬಾರಿಗೆ ಶಾಲೆಗೆ ಹೊರಟ ಬಾಲಕನಿಗೆ 70 ಮಂದಿ ಪೊಲೀಸ್ ಅಧಿಕಾರಿಗಳು ಬೆಂಗಾವಲಾಗಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...