alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಕಾಲಿಂಗ್ ಗೆ ಯಾವುದು ಬೆಸ್ಟ್..?

video-cal

ಇದು ವಿಡಿಯೋ ಕಾಲಿಂಗ್ ಜಮಾನಾ, ಎಷ್ಟೇ ದೂರದಲ್ಲಿದ್ರೂ ಪರಸ್ಪರ ಮುಖ ನೋಡಿಕೊಂಡು ಮಾತನಾಡುವ ಅವಕಾಶವಿದೆ. ವಾಟ್ಸಾಪ್ ಕೂಡ ತನ್ನ 1 ಬಿಲಿಯನ್ ಬಳಕೆದಾರರಿಗಾಗಿ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಪರಿಚಯಿಸಿದೆ.

ವಿಡಿಯೋ ಕಾಲಿಂಗ್ ನಲ್ಲಿ ಈಗಾಗ್ಲೇ ಸ್ಕೈಪ್ ಹಾಗೂ ಫೇಸ್ ಟೈಮ್ ಜನಪ್ರಿಯವಾಗಿವೆ. ಇವುಗಳಿಗೆ ಪೈಪೋಟಿ ಕೊಡುವ ನಿಟ್ಟಿನಲ್ಲಿ ವಾಟ್ಸಾಪ್ ಕೂಡ ವಿಡಿಯೋ ಕಾಲಿಂಗ್ ಅನ್ನು ಪರಿಚಯಿಸಿದೆ. ಆದ್ರೆ ಇವೆಲ್ಲದಕ್ಕೂ ಇಂಟರ್ನೆಟ್ ಬೇಕು, ಡೇಟಾ ಇಲ್ಲದೆ ವಿಡಿಯೋ ಕಾಲಿಂಗ್ ಮಾಡೋದು ಸಾಧ್ಯವಿಲ್ಲ. ಯಾವುದರಲ್ಲಿ ಅತಿ ಕಡಿಮೆ ಡೇಟಾ ಬಳಸಿ ಹೆಚ್ಚು ಮಾತನಾಡಬಹುದು ಅನ್ನೋದನ್ನು ನೋಡಬೇಕಷ್ಟೆ.

ವೈಫೈ ಇಲ್ಲದೇ ಇದ್ದಲ್ಲಿ ಸ್ಕೈಪ್, ವಾಟ್ಸಾಪ್ ಮತ್ತು ಫೇಸ್ ಟೈಮ್ ನಲ್ಲಿ ವಿಡಿಯೋ ಕಾಲಿಂಗ್ ನಿಜಕ್ಕೂ ದುಬಾರಿಯಾಗಲಿದೆ. ಆದ್ರೆ ಈ ಮೂರರಲ್ಲಿ ಅತಿ ಕಡಿಮೆ ಡೇಟಾ ಬಳಸಿದ್ದು ಆ್ಯಪಲ್ ನ ಫೇಸ್ ಟೈಮ್. 4 ನಿಮಿಷಗಳ ವಿಡಿಯೋ ಕರೆಗೆ ಫೇಸ್ ಟೈಮ್ 8.8 ಎಂಬಿ ಡೇಟಾ ಬಳಸಿಕೊಂಡಿದೆ, ಸ್ಕೈಪ್ ಹಾಗೂ ವಾಟ್ಸಾಪ್ ಸರಾಸರಿ 12.3 – 12.7 ಎಂಬಿ ಡೇಟಾ ಬಳಸಿವೆ. ವಿಡಿಯೋ ಕಾಲಿಂಗ್ ಗುಣಮಟ್ಟ ಕೂಡ ಸ್ಕೈಪ್ ಮತ್ತು ವಾಟ್ಸಾಪ್ ನಲ್ಲಿ ಅಷ್ಟು ಚೆನ್ನಾಗಿಲ್ಲ. ಫೇಸ್ ಟೈಮ್ ವಿಡಿಯೋ ಕಾಲಿಂಗ್ ಮೂಲಕ 4 ನಿಮಿಷ ಮಾತನಾಡಲು ನಿಮಗೆ ಅಂದಾಜು 2 ರೂ. 20 ಪೈಸೆ ಖರ್ಚಾಗಲಿದೆ. ಸ್ಕೈಪ್ ಮತ್ತು ವಾಟ್ಸಾಪ್ ಮೂಲಕ 4 ನಿಮಿಷ ಮಾತನಾಡಲು ಕನಿಷ್ಠ 3 ರೂಪಾಯಿ 10 ಪೈಸೆ ಬೇಕು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...