alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಬಳಕೆ ಕುರಿತು ಬಹಿರಂಗವಾಗಿದೆ ಕುತೂಹಲಕಾರಿ ಮಾಹಿತಿ

ಜಗತ್ತಿನ ಫೇವರೆಟ್ ಮೆಸೇಜಿಂಗ್ ಆಪ್ ಆಗಿರುವ ವಾಟ್ಸಾಪ್ ಬಗ್ಗೆ ಹೊಸ ಸಮೀಕ್ಷಾ ವರದಿಯೊಂದು ಹೊರಬಿದ್ದಿದೆ. ಫೋರ್ಬ್ಸ್ ಪತ್ರಿಕೆ ವರದಿ ಪ್ರಕಾರ ಜಗತ್ತಿನ ಆಪ್ ಅನಾಲಿಟಿಕಲ್ ಸಂಸ್ಥೆಯಾಗಿರುವ ಆಪ್ಟೋಪಿಯಾದಿಂದ ನಡೆದಿರುವ ಸಮೀಕ್ಷೆಯ ಪ್ರಕಾರ ವಾಟ್ಸಾಪ್ ಮೂರು ತಿಂಗಳ ಅವಧಿಯಲ್ಲಿ 85 ಮಿಲಿಯನ್ ಗಂಟೆಗಳ ಕಾಲ ಪ್ರಪಂಚದಾದ್ಯಂತ ಬಳಕೆಯಾಗಿದೆ.

1.5 ಬಿಲಿಯನ್ ನಷ್ಟಿರುವ ಜಾಗತಿಕ ವಾಟ್ಸಾಪ್ ಬಳಕೆದಾರರಿಂದ 85 ಬಿಲಿಯನ್ ಗಂಟೆಗಳ ಕಾಲ ವಾಟ್ಸಾಪ್ ಬಳಕೆಯಾಗಿದೆ. ಪ್ರತಿಯೊಬ್ಬರು ಸರಾಸರಿ 11.425 ಗಂಟೆಗಳ ಕಾಲ ವಾಟ್ಸಾಪ್ ಬಳಕೆ ಮಾಡಿದ್ದಾರೆ ಅಂತಿದೆ ಸಮೀಕ್ಷಾ ವರದಿ. ವಾಟ್ಸಾಪ್ ನ ಮಾತೃ ಸಂಸ್ಥೆಯಾದ ಫೇಸ್ಬುಕ್ 30 ಬಿಲಿಯನ್ ಗಂಟೆಗಳ ಕಾಲ ಬಳಸಲ್ಪಟ್ಟಿದೆಯಂತೆ.

ವಾಟ್ಸಾಪ್, ವಿ ಚಾಟ್, ಫೇಸ್ಬುಕ್, ಮೆಸೆಂಜರ್, ಪಂಡೋರಾ, ಯೂಟ್ಯೂಬ್, ಇನ್ಸ್ಟಾಗ್ರಾಮ್, ಟ್ವಿಟ್ಟರ್, ಗೂಗಲ್ ಮ್ಯಾಪ್ ಮತ್ತು ಸ್ಫುಟಿಫೈ ಜಗತ್ತಿನ ಟಾಪ್ ಟೆನ್ ಆಪ್ ಗಳಂತೆ. ಸಮೀಕ್ಷಾ ವರದಿಯ ಪ್ರಕಾರ ವಯಸ್ಕರು ಅಮೆರಿಕದಲ್ಲಿ ಮೂರೂವರೆ ಗಂಟೆಗಳಿಗೂ ಹೆಚ್ಚು ಕಾಲ ವಾಟ್ಸಾಪ್ ಬಳಕೆ ಮಾಡ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...