alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋನ್ ಗಳಲ್ಲಿ ಬಂದ್ ಆಗಲಿದೆ ವಾಟ್ಸಾಪ್

ಸ್ಯಾನ್ ಫ್ರಾನ್ಸಿಸ್ಕೋ: ಸ್ಮಾರ್ಟ್ ಫೋನ್, ಅಂತರ್ಜಾಲ ಬಳಕೆ ಹೆಚ್ಚಾದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಕೂಡ ಜಾಸ್ತಿಯಾಗಿದೆ. ಜನಪ್ರಿಯ ಜಾಲತಾಣವಾಗಿರುವ ವಾಟ್ಸಾಪ್ ಡಿಸೆಂಬರ್ 31 ರಿಂದ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ.

ಹೌದು, ಫೇಸ್ ಬುಕ್ ಒಡೆತನದ ಮೊಬೈಲ್ ಮೆಸೇಂಜಿಂಗ್ ಆಪ್ ಆಗಿರುವ ವಾಟ್ಸಾಪ್ ಕೆಲವೊಂದು ಸ್ಮಾರ್ಟ್ ಫೋನ್ ಗಳಲ್ಲಿ ಡಿಸೆಂಬರ್ 31 ರಿಂದ ಕೆಲಸ ಮಾಡುವುದಿಲ್ಲ.

ಬ್ಲ್ಯಾಕ್ ಬೆರ್ರಿ 10, ಬ್ಲ್ಯಾಕ್ ಬೆರಿ ಒ.ಎಸ್., ವಿಂಡೋಸ್ ಫೋನ್ 8.0 ಮತ್ತು ಕೆಲವು ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ಡಿಸೆಂಬರ್ 31 ರಿಂದ ವಾಟ್ಸಾಪ್ ಸಪೋರ್ಟ್ ಮಾಡುವುದನ್ನು ನಿಲ್ಲಿಸಲಿದೆ. ಈ ಫೋನ್ ಗಳಿಗೆ ವಾಟ್ಸಾಪ್ ಅನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗುವುದಿಲ್ಲ.

ವಾಟ್ಸಾಪ್ ನ ಹಲವು ಫೀಚರ್ ಗಳನ್ನು(ವೈಶಿಷ್ಟ್ಯಗಳನ್ನು) ಭವಿಷ್ಯದಲ್ಲಿ ಬದಲಾವಣೆ ಮಾಡಲಾಗ್ತಿದೆ. ಭವಿಷ್ಯದ ಫೀಚರ್ ಗಳಿಗೆ ಈ ಸ್ಮಾರ್ಟ್ ಫೋನ್ ಗಳು ಸಪೋರ್ಟ್ ಮಾಡುವುದಿಲ್ಲ.

ಇಂತಹ ಫೋನ್ ಗಳಲ್ಲಿ ವಾಟ್ಸಾಪ್ ಬಳಕೆ ಮಾಡಲು ಆಪರೇಟಿಂಗ್ ಸಿಸ್ಟಂ ಅನ್ನು ಹೊಸ ಒ.ಎಸ್. ವರ್ಷನ್ ಗೆ ಬದಲಿಸಿಕೊಳ್ಳಬೇಕಿದೆ. ಅಂಡ್ರಾಯಿಡ್ OS 4.0+ , ಐಫೋನ್ iOS 7+, ವಿಂಡೋಸ್ ಫೋನ್ 8.1+ ಅಪ್ ಗ್ರೇಡ್ ಮಾಡಿಕೊಳ್ಳಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...