alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ವ್ಯಾಪಾರ ವಹಿವಾಟು ಸಂದೇಶಗಳಿಗೆ ಪಾವತಿಸಬೇಕು ಶುಲ್ಕ

ಅತಿ ಶೀಘ್ರದಲ್ಲೇ ಫೇಸ್ಬುಕ್ ಇಂಕ್ ನ ಅಂಗಸಂಸ್ಥೆಯಾದ ವಾಟ್ಸಾಪ್ ತನ್ನ ಸೇವೆಯಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತಿದೆ. ವಾಟ್ಸಾಪ್ ನಲ್ಲಿ ಹರಿದಾಡುವಂತಾ ವ್ಯಾಪಾರ ವಹಿವಾಟಿನ ಸಂದೇಶಗಳಿಗೆ ಬಳಕೆದಾರರು ನಿಗದಿತ ಶುಲ್ಕ ಪಾವತಿಸುವಂತಾ ವ್ಯವಸ್ಥೆ ಜಾರಿಗೆ ಬರಲಿದೆ.

ಸಾಮಾಜಿಕ ಜಾಲತಾಣದ ಮೂಲಕ ವಾಟ್ಸಾಪ್ ಲಿಂಕ್ ಗಳಿಗೆ ಹರಿದಾಡುವಂತಾ ಗ್ರಾಹಕರ ಬ್ಯುಸಿನೆಸ್ ಸಂದೇಶಗಳಿಗೆ 0.5 ರಿಂದ 9 ಸೆಂಟ್ ವರೆಗೆ ಶುಲ್ಕವನ್ನು ಪಾವತಿ ಮಾಡಬೇಕಾಗಲಿದೆ.

ದೇಶ ಮತ್ತು ಸಂದೇಶದ ಮೇಲೆ ಎಷ್ಟು ಹಣ ಪಾವತಿಸಬೇಕು ಅನ್ನೋದನ್ನ ವಾಟ್ಸಾಪ್ ನಿರ್ಧರಿಸಲಿದೆಯಂತೆ. ಫೇಸ್ಬುಕ್ ಈ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳಲಿದೆಯಂತೆ. ದಿನೇ ದಿನೇ ವಾಟ್ಸಾಪ್ ನಿರ್ವಹಣೆಯ ಖರ್ಚು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಫೇಸ್ಬುಕ್ ಹೀಗೊಂದು ನಿರ್ಧಾರಕ್ಕೆ ಬಂದಿದೆಯಂತೆ.

ವಿಶ್ವದಾದ್ಯಂತ ವಾಟ್ಸಾಪ್ ಬಳಕೆದಾರರ ಸಂಖ್ಯೆ 1.5 ಬಿಲಿಯನ್ನಷ್ಟಿದೆ. ಶಿಪ್ಪಿಂಗ್ ಕನ್ಫರ್ಮೇಷನ್, ಅಪಾಯ್ಮೆಂಟ್ ನೆನಪಿಸುವ ಸಂದೇಶಗಳು, ವಾಟ್ಸಾಪ್ ಮೂಲಕ ಕಳಿಸಲಾಗುವ ಟಿಕೆಟ್, ಈವೆಂಟ್ ಗಳ ಪ್ರವೇಶಕ್ಕೆ ಸಿಗುವ ಅನುಮತಿ ಪತ್ರ ಸೇರಿದಂತೆ ನಾನಾ ವ್ಯಾಪಾರಿ ಸಂದೇಶಗಳಿಗೆ ವಾಟ್ಸಾಪ್ ಗೆ ನಿಗದಿತ ಶುಲ್ಕ ಪಾವತಿ ಕಡ್ಡಾಯವಾಗಲಿದೆ. 2019 ರ ಜನವರಿ ಮೊದಲ ವಾರದಿಂದಲೇ ಈ ಪ್ರಕ್ರಿಯೆ ಶುರುವಾಗಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...