alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ತಂದಿದೆ 2 ಹೊಸ ಫೀಚರ್…!

ವಾಟ್ಸಾಪ್ ನಿರಂತರವಾಗಿ ಅಪ್ಡೇಟ್ ಆಗ್ತಿದೆ. ಬಳಕೆದಾರರಿಗೆ ವಾಟ್ಸಾಪ್ ಹೊಸ ಹೊಸ ಫೀಚರ್ ಸೌಲಭ್ಯ ನೀಡ್ತಿದೆ. ಈಗ ವಾಟ್ಸಾಪ್ ಮತ್ತೆರಡು ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡಿದೆ.

ಗ್ರೂಪ್ ಚಾಟ್ ಮಾಡುವವರಿಗೆ ಈಗ ಹೊಸ ಫೀಚರ್ ಅನುಕೂಲವಾಗಲಿದೆ. ಗುಂಪಿನಲ್ಲಿ ಚಾಟ್ ಮಾಡುವವರು ಯಾವ ವಿಷಯವನ್ನು ಚಾಟ್ ಮಾಡುತ್ತಿದ್ದಾರೋ ಅದನ್ನು ಗುಂಪಿನ ಎಲ್ಲ ಸದಸ್ಯರಿಗೆ ತಿಳಿಸಬಹುದು. ಜೊತೆಗೆ ಬೇರೆ ಸದಸ್ಯರನ್ನು ಆಹ್ವಾನಿಸಬಹುದು. ಗ್ರೂಪ್ ಡಿಸ್ಕ್ರಿಪ್ಶನ್ ಫ್ಯೂಚರ್ ಗೆ ಗ್ರೂಪ್ ಹೆಸರಿನ ಕೆಳಗೆ ಸ್ಥಾನ ನೀಡಲಾಗಿದೆ. ಬಳಕೆದಾರ 512 ಅಥವಾ ಅದಕ್ಕಿಂತ ಕಡಿಮೆ ಅಕ್ಷರದಲ್ಲಿ ಡಿಸ್ಕ್ರಿಪ್ಶನ್ ಹಾಕಬೇಕಾಗುತ್ತದೆ.

ಇನ್ನೊಂದು ವೈಶಿಷ್ಟ್ಯವೆಂದ್ರೆ ವಾಯ್ಸ್ ಕಾಲನ್ನು ಕಟ್ ಮಾಡದೆ ಅದನ್ನು ವಿಡಿಯೋ ಕಾಲ್ ಗೆ ಹೋಗಬಹುದಾಗಿದೆ. ಸದ್ಯ ಆಂಡ್ರಾಯ್ಡ್ ಮತ್ತು ವಿಂಡೋಸ್ ಬೀಟಾ ಆವೃತ್ತಿಗಳಲ್ಲಿ ಇದು ಲಭ್ಯವಿದೆ. ವಾಯ್ಸ್ ಕಾಲನ್ನು ವಿಡಿಯೋ ಕಾಲ್ ಆಗಿ ಪರಿವರ್ತಿಸಲು ಬಟನ್ ನೀಡಲಾಗಿದೆ. ಅದನ್ನು ಕ್ಲಿಕ್ ಮಾಡಿತ ತಕ್ಷಣ ವಾಯ್ಸ್ ಕಾಲ್ ವಿಡಿಯೋ ಕಾಲ್ ಆಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...