alex Certify
ಕನ್ನಡ ದುನಿಯಾ       Mobile App
       

Kannada Duniya

ನಮ್ಮ ನೆಲದ ಕಾನೂನು ಪಾಲಿಸಿ..! ವಾಟ್ಸಾಪ್ ಗೆ ಖಡಕ್ ಸೂಚನೆ ಕೊಟ್ಟ ಕೇಂದ್ರ

ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮತ್ತು ವಾಟ್ಸಾಪ್ ಸಿಇಓ ನಡುವೆ ಮಹತ್ವದ ಮಾತುಕತೆ ನಡೆದಿದೆ. ಈ ವೇಳೆ ವಾಟ್ಸಾಪ್ ಭಾರತದ ಕಾನೂನುಗಳನ್ನ ಪಾಲಿಸಲೇಬೇಕು ಅಂತ ಕಟ್ಟುನಿಟ್ಟಾಗಿ ರವಿಶಂಕರ್ ಪ್ರಸಾದ್ ಹೇಳಿದ್ದಾರಂತೆ. ಅಷ್ಟೇ ಅಲ್ಲ ಮಹತ್ವದ ಮಾತುಕತೆಯಲ್ಲಿ ಭಾರತದಲ್ಲಿ ವಾಟ್ಸಾಪ್ ಪ್ರಾದೇಶಿಕ ಕಚೇರಿ ಸ್ಥಾಪಿಸುವಂತೆ ಸೂಚನೆ ನೀಡಿದ್ದಾರಂತೆ.

ಭಾರತದ ಶಿಕ್ಷಣ, ಆರೋಗ್ಯ, ಪ್ರವಾಹ ಸಂತ್ರಸ್ಥರು, ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಕೊಡುಗೆ ನೀಡ್ತಿದೆ ನಿಜ. ಆದ್ರೆ ವಾಟ್ಸಾಪ್ ಮೂಲಕ ಅಷ್ಟೇ ವೇಗವಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವಂತಾ ವಿಚಾರಗಳು ಹರಡುತ್ತಿದೆ. ಅದರಲ್ಲೂ ಕೋಮು ಗಲಭೆಗಳಿಗೆ ಸಂಬಂಧಿದಂತಾ ತಪ್ಪು ಸಂದೇಶಗಳು ವಾಟ್ಸಾಪ್ ಮೂಲಕ ಬೇಗನೆ ಹರಡುತ್ತಿವೆ. ಇದರಿಂದ ಭಾರತದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ.

ಈ ಹಿನ್ನಲೆಯಲ್ಲಿ ವಾಟ್ಸಾಪ್ ಸಿಇಓ ಕ್ರಿಸ್ ಡೇನಿಯಲ್ ಜೊತೆ ರವಿಶಂಕರ್ ಪ್ರಸಾದ್ ಮಾತುಕತೆ ನಡೆಸಿದ್ದಾರೆ. ಕಳೆದ ತಿಂಗಳು ನಡೆದ ಸಭೆಯಲ್ಲಿ ಭಾರತದ ಮಾಹಿತಿ ತಂತ್ರಜ್ಞಾನದ ಕಾರ್ಯದರ್ಶಿ ಮತ್ತು ಇತರೆ ಅಧಿಕಾರಿಗಳೊಂದಿಗೆ ವಾಟ್ಸಾಪ್ ಸಿಓಓ ಮ್ಯಾಥ್ಯೂ ಸೇರಿದಂತೆ ಉನ್ನತಾಧಿಕಾರಿಗಳ ಸಭೆ ನಡೆದಿತ್ತು. ಈ ಬಾರಿ ನಡೆದ ಸಭೆಯಲ್ಲಿ ರವಿಶಂಕರ್ ಪ್ರಸಾದ್ ವಾಟ್ಸಾಪ್ ಸಿಇಓಗೆ ಖಡಕ್ ಸೂಚನೆ ನೀಡಿದ್ದಾರಂತೆ.

ವಾಟ್ಸಾಪ್ ಗೆ ಮೂರು ಅಂಶಗಳ ಸೂಚನೆಯನ್ನ ರವಿಶಂಕರ್ ಪ್ರಸಾದ್ ನೀಡಿದ್ದಾರಂತೆ. ಸುಳ್ಳು ಸುದ್ದಿ ಹರಡದಂತೆ ತಡೆಯಬೇಕಾದ ಜವಾಬ್ದಾರಿ ವಾಟ್ಸಾಪ್ ಮೇಲಿದೆ. ಎಲ್ಲಾ ಸಮಸ್ಯೆಗಳಿಗೂ ಅಮೆರಿಕದಿಂದಲೇ ಪರಿಹಾರ ಕಂಡುಕೊಳ್ಳೋದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಭಾರತದಲ್ಲೂ ವಾಟ್ಸಾಪ್ ಕಚೇರಿ ಆರಂಭಿಸುವಂತೆ ಸೂಚನೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...