alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಬಳಕೆದಾರರಿಗೊಂದು ಮುಖ್ಯ ಮಾಹಿತಿ

ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಲೇ ಇರುವ ವಾಟ್ಸಾಪ್ ಈಗ ವಾಣಿಜ್ಯೀಕರಣಗೊಳಿಸಲು ಮುಂದಾಗಿದೆ. ಹಾಗಂತ ನಿಮ್ಮ ಜೇಬಿಗೇನೂ ಕತ್ತರಿ ಹಾಕಲ್ಲ. ನಿಮ್ಮ ಸ್ಟೇಟಸ್ ನಲ್ಲಿ ಜಾಹೀರಾತು ಹಾಕುವ ಫೀಚರ್ ಅನ್ನು ಪರಿಚಯಿಸುತ್ತಿದೆ.

ಅಂಡ್ರಾಯ್ಡ್ ವರ್ಷನ್ 2.18.305 ರಲ್ಲಿ ಈ ಸೌಲಭ್ಯವನ್ನು ಅಳವಡಿಸಲಾಗಿದ್ದು, ಪ್ರಸ್ತುತ ಬಳಕೆದಾರರಿಗೆ ಲಭ್ಯವಿಲ್ಲ. ಎಲ್ಲ ಅಂದುಕೊಂಡಂತಾದರೆ 2019 ರ ಹೊತ್ತಿಗೆ ಜಾಹೀರಾತುಗಳು ನಿಮ್ಮ ಸ್ಟೇಟಸ್ ನಲ್ಲಿ ಹರಿದಾಡಲಿವೆ.

ಐಒಎಸ್ ನಲ್ಲಿ ಈಗಾಗಲೇ ಈ ಫೀಚರ್ ಚಾಲ್ತಿಯಲ್ಲಿದೆ ಎಂದು ಕಳೆದ ತಿಂಗಳು ಗಾಳಿ ಸುದ್ದಿ ಹಬ್ಬಿಸಲಾಗಿತ್ತಾದರೂ, ಈಗ ಅಂಡ್ರಾಯ್ಡ್ ನಲ್ಲಿಯೂ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ವಾಟ್ಸಾಪ್ ಕಂಪನಿಯಾಗಲೀ, ಇದರ ಒಡೆತನ ಹೊಂದಿರುವ ಫೇಸ್ಬುಕ್ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡುತ್ತಿಲ್ಲ. ಅಲ್ಲದೆ, ಈ ಸೌಲಭ್ಯದಿಂದ ಬಳಕೆದಾರರಿಗೆ ಏನಾದರೂ ಆದಾಯ ಬರಲಿದೆಯೇ ಎಂಬ ಬಗ್ಗೆಯೂ ಸ್ಪಷ್ಟತೆ ಸಿಗುತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...