alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವರ್ಷದ ಸಂಭ್ರಮದಲ್ಲೇ ಕೈಕೊಟ್ಟಿತ್ತು ವಾಟ್ಸಾಪ್

ನಿನ್ನೆ ರಾತ್ರಿ ಹೊಸ ವರ್ಷದ ಶುಭಾಶಯಗಳ ಭರಾಟೆಯಲ್ಲಿ ವಾಟ್ಸಾಪ್ ಸ್ಥಗಿತಗೊಂಡಿತ್ತು. ಒಮ್ಮೆಲೇ ಕೋಟ್ಯಾಂತರ ಜನರು ಮೆಸೇಜ್, ವಿಡಿಯೋ, ಇಮೇಜ್ ಗಳನ್ನು ಕಳಿಸಿದ್ದರಿಂದ ಸುಮಾರು 1 ಗಂಟೆ ಕಾಲ ವಾಟ್ಸಾಪ್ ಸರಿಯಾಗಿ ಕಾರ್ಯನಿರ್ವಹಿಸಿಲ್ಲ.

ತಡರಾತ್ರಿ 1 ಗಂಟೆವರೆಗೆ ವಾಟ್ಸಾಪ್ ಸ್ಥಗಿತಗೊಂಡಿತ್ತು. ಇಂದು ಬೆಳಗ್ಗೆ ತೊಂದರೆಯನ್ನು ಸರಿಪಡಿಸಲಾಗಿದ್ದು, ವಾಟ್ಸಾಪ್ ತನ್ನ ಬಳಕೆದಾರರಲ್ಲಿ ಕ್ಷಮೆ ಕೂಡ ಕೇಳಿದೆ. ವಾಟ್ಸಾಪ್ ಕ್ರ್ಯಾಶ್ ಆಗಿರೋ ಬಗ್ಗೆ ಹಲವರು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿದ್ದು, ವಿಶ್ವದಾದ್ಯಂತ ಇದನ್ನು 1.2 ಬಿಲಿಯನ್ ಜನರು ಬಳಸುತ್ತಿದ್ದಾರೆ. ಹಲವು ದೇಶಗಳಲ್ಲಿ ಉದ್ಯಮ ವಹಿವಾಟುಗಳಿಗೆ ಕೂಡ ವಾಟ್ಸಾಪ್ ಅನ್ನೇ ಬಳಸಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...