alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಲಭ್ಯ ‘ಡಿಲೀಟ್ ಫಾರ್ ಎವರಿವನ್’ ಆಪ್ಷನ್

ವಾಟ್ಸಾಪ್ ನಲ್ಲಿ ಮೆಸೇಜ್ ಡಿಲೀಟ್ ಅಥವಾ ರಿಕಾಲ್ ಆಪ್ಷನ್ ಇಲ್ಲ. ಕಳೆದ ಒಂದು ವರ್ಷದಿಂದ್ಲೂ ಈ ಫೀಚರ್ ಅಳವಡಿಸೋದಾಗಿ ವಾಟ್ಸಾಪ್ ಹೇಳ್ತಾನೇ ಇದೆ. ಇಂಟರ್ನಲ್ ಕೋಡ್ ನಲ್ಲಿ ಕಂಪನಿ ಇದನ್ನು ಉಲ್ಲೇಖಿಸಿತ್ತು. ಆದ್ರೆ ಬಳಕೆದಾರರಿಗೆ ಮಾತ್ರ ಲಭ್ಯವಾಗಿರಲಿಲ್ಲ.

ಇದೀಗ ‘ಡಿಲೀಟ್ ಫಾರ್ ಎವರಿವನ್’ ಹೆಸರಲ್ಲಿ ಹೊಸ ಫೀಚರ್ ಅನ್ನು ಆ್ಯಂಡ್ರಾಯ್ಡ್, ಐಫೋನ್ ಮತ್ತು ವಿಂಡೋಸ್ ಫೋನ್ ಆ್ಯಪ್ಸ್ ಬಳಕೆದಾರರಿಗಾಗಿ ಅಳವಡಿಸಲಾಗ್ತಿದೆ. ಸೆಂಡರ್ ಹಾಗೂ ರಿಸೀವರ್ ಇಬ್ಬರೂ ವಾಟ್ಸಾಪ್ ನ ಲೇಟೆಸ್ಟ್ ವರ್ಶನ್ ಡೌನ್ಲೋಡ್ ಮಾಡಿಕೊಂಡ್ರೆ ಮಾತ್ರ ಇದನ್ನು ಬಳಸಲು ಸಾಧ್ಯ. ವೆಬ್ ವರ್ಶನ್ ನಲ್ಲೂ ಇದು ಲಭ್ಯವಿದೆ.

ಟ್ರಾಶ್ ಐಕಾನ್ ಪ್ರೆಸ್ ಮಾಡಿದಾಗ ನಿಮಗೆ ಡಿಲೀಟ್ ಫಾರ್ ಎವರಿವನ್ ಆಪ್ಷನ್ ಸಿಗುತ್ತದೆ. ಅದರ ಜೊತೆಗೆ ಡಿಲೀಟ್ ಫಾರ್ ಮಿ ಆಪ್ಷನ್ ಕೂಡ ಇದೆ. ಟೆಕ್ಸ್ಟ್, ಇಮೇಜ್, ವಿಡಿಯೋ, ಜಿಐಎಫ್, ವಾಯ್ಸ್ ಮೆಸೇಜ್, ಕಾಂಟಾಕ್ಟ್, ಫೈಲ್ಸ್, ಲೊಕೇಶನ್, ಕೋಟೆಡ್ ಮೆಸೇಜ್, ಸ್ಟೇಟಸ್ ರಿಪ್ಲೈ ಹೀಗೆ ವಾಟ್ಸಾಪ್ ನ ಎಲ್ಲದರಲ್ಲೂ ಇದು ಕೆಲಸ ಮಾಡಲಿದೆ.

ಮೆಸೇಜ್ ಕಳಿಸಿ 7 ನಿಮಿಷಗಳೊಳಗೆ ನೀವು ಅದನ್ನು ಡಿಲೀಟ್ ಮಾಡಬಹುದು, ನಂತರ ರಿಕಾಲ್ ಮಾಡಲು ಸಾಧ್ಯವಿಲ್ಲ. ಟೆಲಿಗ್ರಾಮ್ ಮತ್ತು ವೈಬರ್ ನಲ್ಲಿ ಈ ಆಪ್ಷನ್ ಈಗಾಗ್ಲೇ ಲಭ್ಯವಿದೆ. ವಾಟ್ಸಾಪ್ ಹೊಸ ಎಮೋಜಿಗಳನ್ನು ಕೂಡ ಪರಿಚಯಿಸಿದೆ. ಬಗೆಬಗೆಯ ಹೊಸ ಎಮೋಜಿಗಳು ಈಗ ಲಭ್ಯವಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...