alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನೀಡ್ತಿದೆ ಮತ್ತೆರಡು ಹೊಸ ಫೀಚರ್

ಜನಪ್ರಿಯ ಮೆಸ್ಸೇಜಿಂಗ್ ಆ್ಯಪ್ ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಬೀಟಾ ಅಪ್ಡೇಟ್ ನೀಡಿದೆ. ಈ ಹೊಸ ಅಪ್ಡೇಟ್ ವರ್ಷನ್ V2.18.159 ನಲ್ಲಿ ಬಳಕೆದಾರರಿಗೆ ಎರಡು ಫೀಚರ್ ಸಿಗಲಿದೆ. ಒಂದು ಮೀಡಿಯಾ ವಿಜಿಬಿಲಿಟಿಯಾದ್ರೆ ಇನ್ನೊಂದು ನ್ಯೂ ಕಾಂಟೆಕ್ಟ್ ಶಾರ್ಟ್ಕಟ್ ಆಗಿದೆ.

ಮೀಡಿಯಾ ವಿಜಿಬಿಲಿಟಿ ಫೀಚರ್ ನಿಂದ ಗ್ರಾಹಕರು ಶೇರ್ ಮಾಡಿದ ಮೀಡಿಯಾದ ವಿಜಿಬಿಲಿಟಿಯನ್ನು ಸೆಟ್ ಮಾಡಬಹುದಾಗಿದೆ. ಡೇಟಾ ಎಂಡ್ ಸ್ಟೋರೇಜ್ ನಲ್ಲಿ ಹೊಸ ಆಯ್ಕೆ ಕಾಣಿಸಲಿದೆ. ಬಳಕೆದಾರರು ಆಯ್ಕೆಯನ್ನು ಸಕ್ರಿಯಗೊಳಿಸಿದ್ರೆ ಡೌನ್ಲೋಡ್ ಮಾಡಿದ ಎಲ್ಲವೂ ವಾಟ್ಸಾಪ್ ಅಪ್ಲಿಕೇಷನ್ ಹೊರಗೂ ಕಾಣಿಸಲಿದೆ. ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ರೆ ಡೌನ್ಲೋಡ್ ಮಾಡಿದ ಫೋಟೋ, ವಿಡಿಯೋವನ್ನು ನೋಡಲು ವಾಟ್ಸಾಪ್ ಅಪ್ಲಿಕೇಷನ್ ಗೆ ಹೋಗಬೇಕಾಗುತ್ತದೆ.

ಇನ್ನೊಂದು ಕಾಂಟೆಕ್ಟ್ ಶಾರ್ಟ್ಕಟ್ ಫೀಚರ್ ಆಗಿದೆ. ಈ ಶಾರ್ಟ್ಕಟ್ ಕ್ಲಿಕ್ ಮಾಡುವ ಮೂಲಕ ಹೊಸ ನಂಬರ್ ಗಳನ್ನು ಹೆಚ್ಚು ತ್ವರಿತವಾಗಿ ನೋಡಬಹುದಾಗಿದೆ. ಈ ಎರಡೂ ಫೀಚರ್ ಆಂಡ್ರಾಯ್ಡ್ ಬೀಟಾದಲ್ಲಿ ಮಾತ್ರ ಲಭ್ಯವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...