alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಬ್ಯಾನ್ ಆಯ್ತು 1 ಲಕ್ಷ ವಾಟ್ಸಾಪ್ ಅಕೌಂಟ್

ವಾಟ್ಸಾಪ್ ನಲ್ಲಿ ಸುಳ್ಳು ಸುದ್ದಿಗಳು ಹರಿದಾಡ್ತಿವೆ. ಇದು ಅನೇಕರ ಪ್ರಾಣವನ್ನು ಬಲಿ ಪಡೆದಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ವಾಟ್ಸಾಪ್, ಸುಳ್ಳು ಸುದ್ದಿಗೆ ಬ್ರೇಕ್ ಹಾಕಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದೇ ಕಾರಣಕ್ಕೆ 1,00,000 ವಾಟ್ಸಾಪ್ ಅಕೌಂಟ್ ಗಳನ್ನು ನಿಷೇಧಿಸಿದೆ.

ವಾಟ್ಸಾಪ್ ನಿಷೇಧ ಹೇರಿರುವುದು ಭಾರತೀಯರ ಖಾತೆಗಳನ್ನಲ್ಲ. ಸದ್ಯ ಬ್ರೆಜಿಲ್ ನಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಸುಳ್ಳು ಸುದ್ದಿಗಳು ಆಪತ್ತು ತರುವ ಸಾಧ್ಯತೆಯಿದೆ. ಹಾಗಾಗಿ ವಾಟ್ಸಾಪ್, ಬ್ರೆಜಿಲ್ ನ 1,00,000 ಖಾತೆಗಳ ಮೇಲೆ ನಿಷೇಧ ಹೇರಿದೆ.

ಬ್ರೆಜಿಲ್ ನಲ್ಲಿ 21 ಕೋಟಿ ಜನಸಂಖ್ಯೆಯಿದೆ. ಅದ್ರಲ್ಲಿ 12 ಕೋಟಿ ಜನರು ವಾಟ್ಸಾಪ್ ಬಳಸುತ್ತಿದ್ದಾರೆ. ಸ್ನೇಹಿತರು, ಸಂಬಂಧಿಕರನ್ನು ಸಂಪರ್ಕಿಸಲು ವಾಟ್ಸಾಪ್ ಉತ್ತಮ ಮಾರ್ಗವಾಗಿದೆ. ಅಕ್ಟೋಬರ್ 7 ರಂದು ಬ್ರೆಜಿಲ್ ನಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಜೊತೆಗೆ ಪ್ರಚಾರ ಕಾರ್ಯವನ್ನು ಬಲಪಂಥೀಯ ಅಭ್ಯರ್ಥಿ ಮಾಡಿದ್ದಾರೆಂಬ ದೂರಿದೆ. ಹಾಗಾಗಿ ವಾಟ್ಸಾಪ್ 1,00,000 ವಾಟ್ಸಾಪ್ ಅಕೌಂಟ್ ಮೇಲೆ ನಿಷೇಧ ಹೇರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...