alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಿಗೆ ಬಂತು ಪ್ರಪಂಚ…? ನೊಂದು ನುಡಿದಳು ಆ ತಾಯಿ

ನಮ್ಮ ನಡುವೆ ನಡೆಯುವಂತ ಕೆಲವೊಂದು ಘಟನೆಗಳು ಮಾನವೀಯತೆಯ ನೆಲಗಟ್ಟನ್ನೇ ಪ್ರಶ್ನಿಸುವಂತೆ ಮಾಡುತ್ತವೆ. ಇಂತಾ ಒಂದು ಪ್ರಶ್ನೆ ದೂರದ ಇಂಗ್ಲೆಂಡ್ ನ ಆ ಮಹಿಳಾ ಬ್ಲಾಗರ್ ಗೆ ಕೂಡ ಇತ್ತೀಚೆಗಷ್ಟೆ ಕಾಡಿದೆ. ಅದಕ್ಕಾಗಿಯೇ ಇಂಗ್ಲೆಂಡ್ ನ ಕೇಟ್ ಹಿಚೆನ್ಸ್ ಎನ್ನುವ 32 ವರ್ಷದ ಮಹಿಳೆ ಸಮಾಜದ ಕಠೋರ ಮನಃಸ್ಥಿತಿಯನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಕೋಪದಿಂದ ಪ್ರಶ್ನೆ ಮಾಡಿದ್ದಾರೆ.

ಅವರ ಆಕ್ರೋಶಕ್ಕೆ ಕಾರಣವೂ ಇದೆ. ಇತ್ತೀಚೆಗಷ್ಟೆ ಅವರು ಇಂಗ್ಲೆಂಡ್ ನ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ತಮ್ಮ ಆರು ತಿಂಗಳ ಮಗುವನ್ನು ಹಿಡಿದುಕೊಂಡೇ ಅವರು ಮೆಟ್ರೋ ಹತ್ತಿದ್ದರು. ಟ್ರೇನ್ ಹತ್ತಿದ ಸಂದರ್ಭದಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರಿಗೆ ಸಹ ಪ್ರಯಾಣಿಕರಲ್ಲಿ ಒಬ್ಬರೂ ಕೂಡ ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿಕೊಡಲಿಲ್ಲ.

ಆಕೆ ನಿಂತುಕೊಂಡೇ ಮಗುವಿಗೆ ಎದೆಹಾಲುಣಿಸುವುದನ್ನು ನೋಡಿಯೂ ಯಾರೊಬ್ಬರು ತಾವು ಕುಳಿತ ಜಾಗವನ್ನು ಆಕೆಗೆ ಬಿಟ್ಟುಕೊಡಲಿಲ್ಲ. ಕೆಲವರು ಕೇಟ್ ಸ್ಥಿತಿಯನ್ನ ಗಮನಿಸಲಿಲ್ಲವಂತೆ. ಮತ್ತೆ ಕೆಲವರು ಆಕೆಯನ್ನ ನೋಡಿಯೂ ನೋಡದಂತೆ ನಕ್ಕು ಸುಮ್ಮನಾದರಂತೆ. ಪ್ರಯಾಣದ ಬಹುತೇಕ ಸಮಯ ಅವರು ನಿಂತುಕೊಂಡೇ ಮಗುವಿಗೆ ಎದೆಹಾಲುಣಿಸಿದ್ದಾರೆ. ಆನಂತರದಲ್ಲಿ ಒಬ್ಬ ಮಹಿಳೆ ತಮ್ಮ ಜಾಗವನ್ನು ಕೇಟ್ ಗೆ ಬಿಟ್ಟುಕೊಟ್ಟಿದ್ದಾರೆ.

ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡ್ತಿದ್ದ ಹಾಗೆ ಸಾಕಷ್ಟು ಮಂದಿ ಘಟನೆಯನ್ನ ಖಂಡಿಸಿದ್ದಾರೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾನವೀಯತೆಯ ಗುಣಗಾನ ಮಾಡುವ ಸಮಾಜ ಅದನ್ನು ಅಷ್ಟೇ ನಿಷ್ಠೆಯಿಂದ ಆಚರಣೆ ಮಾಡ್ತಿಲ್ಲ ಅಂತ ಕೇಟ್ ಬೇಸರ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...