alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಯ ಉಳಿಸಲು ಇಂಥಾ ಕೆಲಸ ಮಾಡಿದ್ದಾನೆ ಈ ಆಸಾಮಿ

car-in-store_650x400_41497432526

ವಿಚಿತ್ರ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ಈ ವಿಡಿಯೋದಲ್ಲಿ ಕಾರು ಚಾಲಕನೊಬ್ಬ ವಾಹನವನ್ನು ಅಂಗಡಿಯೊಳಕ್ಕೆ ತೆಗೆದುಕೊಂಡು ಬಂದಿದ್ದಾನೆ. ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿ, ಅಂಗಡಿಗೆ ಬಂದ್ರೆ ಸುಮ್ನೆ ಟೈಮ್ ವೇಸ್ಟ್ ಅನ್ನೋ ಕಾರಣಕ್ಕೆ ಇಂಥಾ ಕೆಲಸ ಮಾಡಿದ್ದಾನೆ.

ಕಾರು ಚಾಲಕನ ಈ ಯಡವಟ್ಟು ಸಿಸಿಟಿವಿಯಲ್ಲೂ ಸೆರೆಯಾಗಿದೆ. ಚೀನಾದ ಜೆನ್ಜಿಯಾಂಗ್ ಎಂಬಲ್ಲಿ ನಡೆದ ಘಟನೆ ಇದು. ನೇರವಾಗಿ ಕಾರನ್ನು ಅಂಗಡಿಯ ಒಳಕ್ಕೇ ನುಗ್ಗಿಸಿದ ಚಾಲಕ ಅಲ್ಲೇ ನಿಲ್ಲಿಸಿದ್ದ. ಮಳಿಗೆಯ ಸಿಬ್ಬಂದಿಗೆ ಚಾಲಕನ ಕೃತ್ಯ ನೋಡಿ ಆಶ್ಚರ್ಯವಾಗಿತ್ತು.

ಕೊನೆಗೆ ಅವನಿಗೆ ಬೇಕಾದ ವಸ್ತುಗಳು ಹಾಗೂ ಬಿಲ್ ಎರಡನ್ನೂ ಸಿಬ್ಬಂದಿ ಅಲ್ಲಿಗೇ ತಂದು ಕೊಟ್ಟಿದ್ದಾರೆ. ಅದನ್ನು ತೆಗೆದುಕೊಂಡ ಚಾಲಕ ಅಲ್ಲಿಂದ ಹೊರಬಿದ್ದಿದ್ದಾನೆ. ಈ ರೀತಿ ಅಂಗಡಿಯೊಳಗೆ ಕಾರು ತಂದ್ರೆ ಅನಾಹುತವಾಗಬಹುದು ಅನ್ನೋ ಕಲ್ಪನೆ ಚಾಲಕನಿಗೆ ಇದ್ದಂತಿಲ್ಲ. ಈ ವಿಡಿಯೋವನ್ನು 53,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...