alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೆಂಡ್ ರಾಜಕುಮಾರನ ಮದುವೆಗೆ ಸಿದ್ಧವಾಗಿದೆ ಕೇಕ್

ಇಂಗ್ಲೆಂಡ್ ರಾಜಕುಮಾರ ಹ್ಯಾರಿ ಹಾಗೂ ಮೇಘನ್ ಮದುವೆ ನಾಳೆ ಮೇ 19ರಂದು ನಡೆಯಲಿದೆ. ಮದುವೆಗೆ ಎಲ್ಲ ತಯಾರಿ ಪೂರ್ಣಗೊಳ್ಳುತ್ತಿದೆ.ಮದುವೆಗಾಗಿ ವಿಶೇಷ ಕೇಕ್ ತಯಾರಿಸಲಾಗಿದೆ. ಕೇಕ್ ಸಿದ್ಧಪಡಿಸಲು 5 ದಿನ ತೆಗೆದುಕೊಳ್ಳಲಾಗಿದೆ.

ಹ್ಯಾರಿ, ಮೇಘನ್ ಮದುವೆಗೆ ಆರು ಬಾಣಸಿಗರು ಸುಂದರ ಕೇಕ್ ತಯಾರಿಸಿದ್ದಾರೆ. ರಾಣಿ ಎಲಿಜಬೆತ್ ಮೊಮ್ಮಗ ಹ್ಯಾರಿ ಅಮೆರಿಕಾ ನಟಿ ಮೇಘನ್ ಮಾರ್ಕೆಲ್ ಜೊತೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. 15 ನೇ ಶತಮಾನದ ಸೇಂಟ್ ಜಾರ್ಜ್ ಚರ್ಚ್ ನಲ್ಲಿ ಹ್ಯಾರಿ-ಮೇಘನ್ ಉಂಗುರ ಬದಲಿಸಿಕೊಳ್ಳಲಿದ್ದಾರೆ.

ಹ್ಯಾರಿ ಹಾಗೂ ಮೇಘನ್, ಕೇಕ್ ನಿಂಬು ಹಾಗೂ ಹೂವಿನ ಫ್ಲೇವರ್ ಹೊಂದಿರಲಿ ಎಂದು ಬಯಸಿದ್ದರಂತೆ. ಅವ್ರ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಕೇಕ್ ತಯಾರಿಸಲಾಗಿದೆಯಂತೆ. ಅದ್ರಲ್ಲಿ ಎಲ್ಲ ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಲಾಗಿದೆ. ರಾಜಕುಮಾರನ ಮದುವೆಗೆ ಕೇಕ್ ತಯಾರಿಸುವುದು ಗೌರವದ ಸಂಗತಿ ಎಂದು ಕೇಕ್ ಡಿಸೈನರ್ ಪ್ಯಾಕ್ ಹೇಳಿದ್ದಾರೆ.

2016ರಲ್ಲಿ ಹ್ಯಾರಿ, ಮೇಘನ್ ಮೊದಲು ಭೇಟಿಯಾಗಿದ್ದರು. ಚಿಕನ್ ತಯಾರಿಸುವ ವೇಳೆ ಹ್ಯಾರಿ, ಮೇಘನ್ ಗೆ ಪ್ರೇಮ ನಿವೇದನೆ ಮಾಡಿದ್ದರು. ಮೇಘನ್ ಗೆ ಇದು ಎರಡನೇ ಮದುವೆ. 2013ರಲ್ಲಿ ಮೇಘನ್ ವಿಚ್ಛೇದನ ಪಡೆದಿದ್ದಾರೆ. ಮೇಘನ್ ಹಾಗೂ ನಟಿ ಪ್ರಿಯಾಂಕ ಚೋಪ್ರಾ ಒಳ್ಳೆ ಸ್ನೇಹಿತೆಯರಂತೆ. ಮೇಘನ್ ಮದುವೆಯಲ್ಲಿ ಪಿಗ್ಗಿ ಉಪಸ್ಥಿತರಿರುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...