alex Certify
ಕನ್ನಡ ದುನಿಯಾ       Mobile App
       

Kannada Duniya

ಮಲೇಶಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ರಾ ನಟಿ ನಯನತಾರಾ..?

nayan1

ಖ್ಯಾತ ನಟಿ ನಯನತಾರಾ ಅವರಿಗೂ ವಿವಾದಕ್ಕೂ ಬಿಡಿಸಲಾಗದ ನಂಟು. ಈ ಕಾರಣಕ್ಕಾಗಿಯೇ ಹಲವು ಬಾರಿ ಅವರು ಸುದ್ದಿಯಾಗಿದ್ದಾರೆ. ಸದ್ಯ ನಯನತಾರಾ ತಮ್ಮ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಮಲೇಶಿಯಾದಲ್ಲಿದ್ದು, ಅಲ್ಲಿ ನಡೆದಿರುವ ಘಟನೆಯೊಂದರ ಕಾರಣಕ್ಕೆ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ನಯನತಾರಾ ಅವರನ್ನು ಮಲೇಶಿಯಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ವಿಚಾರಣೆಗೊಳಪಡಿಸಿದ್ದರೆಂಬ ಮಾತುಗಳು ಕೇಳಿ ಬರುತ್ತಿದ್ದು, ಮಲೇಶಿಯಾದಲ್ಲಿ ನಿಷೇಧಕ್ಕೊಳಗಾಗಿರುವ ‘ಐಸ್ ಡ್ರಗ್’ ನ್ನು ನಯನತಾರಾ ಇಟ್ಟುಕೊಂಡಿದ್ದೇ ಇದಕ್ಕೆ ಕಾರಣವೆಂಬ ಮಾತುಗಳು ಕೇಳಿ ಬರುತ್ತಿವೆ.

ಮತ್ತೊಂದು ಮೂಲದ ಪ್ರಕಾರ, ನಯನತಾರಾ ಅವರ ವೀಸಾದಲ್ಲಿ ಸಮಸ್ಯೆ ತಲೆದೋರಿದ್ದ ಕಾರಣಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ವಿಚಾರಣೆ ನಡೆಸಿ ಮನವರಿಕೆಯಾದ ಬಳಿಕ ಬಿಟ್ಟು ಕಳುಹಿಸಿದ್ದಾರೆನ್ನಲಾಗುತ್ತಿದೆ. ಅರವಿಂದ್ ಶಂಕರ್ ನಿರ್ದೇಶನದ ‘ಇರುಮಗನ್’ ಚಿತ್ರದಲ್ಲಿ ವಿಕ್ರಮ್ ಎದುರು ನಯನತಾರಾ ನಟಿಸುತ್ತಿದ್ದು, ಇದರ ಚಿತ್ರೀಕರಣಕ್ಕಾಗಿ ಮಲೇಶಿಯಾಕ್ಕೆ ತೆರಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...