alex Certify
ಕನ್ನಡ ದುನಿಯಾ       Mobile App
       

Kannada Duniya

ತಿಮಿಂಗಿಲದ ವಾಂತಿಗೂ ಇದೆ ಭಾರೀ ಬೆಲೆ…!

ಶೀರ್ಷಿಕೆ ನೋಡಿ ಇದೆಂತಾ ಸುದ್ದಿಯಪ್ಪಾ ಎಂದು ಮುಖ ಸಿಂಡರಿಸುತ್ತಿದ್ದೀರಾ. ನಾವು ಹೇಳ್ತಿರೋದು ನಿಜ. ತಿಮಿಂಗಿಲದ ವಾಂತಿಗೆ ಭಾರೀ ಬೆಲೆ ಇದೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತೆ.

ತಿಮಿಂಗಿಲಗಳು ಕೆಲವೊಮ್ಮೆ ವಾಂತಿ ಮಾಡಿಕೊಳ್ಳುತ್ತವೆ. ಮೇಣದಂತಿರುವ ಇದನ್ನು ಅಂಬರ್ ಗ್ರೀಸ್ ಎಂದೂ ಕರೆಯುತ್ತಾರೆ. ಸಮುದ್ರದ ನೀರಿನಲ್ಲಿ ವರ್ಷಗಟ್ಟಲೆ ತೇಲುವ ಇದು ಬರಬರುತ್ತಾ ಕಲ್ಲಿನಂತಾಗುತ್ತದೆ. ಬಳಿಕ ಸಮುದ್ರದ ದಡ ಬಂದು ಸೇರುತ್ತದೆ. ಇದಕ್ಕಾಗಿ ಹಲವರು ಹುಡುಕಾಟ ನಡೆಸುತ್ತಾರಾದರೂ ಅದೃಷ್ಟ ಇದ್ದವರಿಗೆ ಮಾತ್ರ ಸಿಗುತ್ತದೆ.

ಈ ಅಂಬರ್ ಗ್ರೀಸ್ ಅನ್ನು ಪರ್ಫ್ಯೂಮ್ ಉದ್ಯಮದಲ್ಲಿ ಬಳಕೆ ಮಾಡಿಕೊಳ್ಳಲಿದ್ದು, ಲಕ್ಷಾಂತರ ರೂಪಾಯಿಗಳಿಗೆ ಇದನ್ನು ಖರೀದಿ ಮಾಡುತ್ತಾರೆ. ಇದು ಸಿಕ್ಕವರದ್ದು, ಅದೃಷ್ಟವೇ ಸರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...