alex Certify
ಕನ್ನಡ ದುನಿಯಾ       Mobile App
       

Kannada Duniya

ಗನ್ ಇದ್ದರೂ ಗುಂಡು ಹಾರಿಸದ ಅಧಿಕಾರಿಗೆ ಸಿಕ್ತು ಭಾರೀ ಪರಿಹಾರ

ವೆಸ್ಟ್ ವರ್ಜಿನಿಯಾದಲ್ಲಿ ಮಾಜಿ ಪೊಲೀಸ್ ಅಧಿಕಾರಿಯೊಬ್ಬರಿಗೆ 175,000 ಡಾಲರ್ ಪರಿಹಾರ ನೀಡಲು ಇಲಾಖೆ ಒಪ್ಪಿಕೊಂಡಿದೆ. ಗನ್ ಹಿಡಿದಿದ್ದ ಶಂಕಿತನ ಮೇಲೆ ಗುಂಡು ಹಾರಿಸಿಲ್ಲ ಅನ್ನೊ ಕಾರಣಕ್ಕೆ ಪೊಲೀಸ್ ಅಧಿಕಾರಿಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.

2016ರಲ್ಲಿ ನಡೆದ ಘಟನೆ ಅದು. ಪೊಲೀಸ್ ಅಧಿಕಾರಿ ಸ್ಟೀಫನ್ ಮೇಡರ್ 23 ವರ್ಷದ ಯುವಕನ ಮೇಲೆ ಗುಂಡು ಹಾರಿಸಿರಲಿಲ್ಲ. ಈ ಕಾರಣಕ್ಕೆ ಅವರನ್ನು ಕೆಲಸದಿಂದ ಕಿತ್ತು ಹಾಕುವಂತಿರಲಿಲ್ಲ. ಹಾಗಾಗಿ ನ್ಯಾಯಕ್ಕಾಗಿ ಸ್ಟೀಫನ್ ಕೋರ್ಟ್ ಮೆಟ್ಟಿಲೇರಿದ್ರು.

ಈಗ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಸ್ಟೀಫನ್ ಗೆ ಪರಿಹಾರ ಮೊತ್ತ ಕೊಡಲು ಒಪ್ಪಿಕೊಂಡಿದೆ. ಕೌಟುಂಬಿಕ ಕಲಹವೊಂದಕ್ಕೆ ಸಂಬಂಧಪಟ್ಟ ಘರ್ಷಣೆ ಅದಾಗಿತ್ತು, ಗನ್ ಹಿಡಿದಿದ್ದ ಯುವಕನಿಂದ ಅಪಾಯವಿಲ್ಲ ಅನ್ನೋದನ್ನು ಅರಿತಿದ್ದ ಸ್ಟೀಫನ್ ಆತನ ಮೇಲೆ ಗುಂಡು ಹಾರಿಸಿರಲಿಲ್ಲ.

ಗನ್ ಕೈಬಿಡುವಂತೆ ಅವನ ಮನವೊಲಿಸಲು ಸ್ಟೀಫನ್ ಯತ್ನಿಸುತ್ತಿದ್ರು. ಅದೇ ಸಮಯಕ್ಕೆ ಸ್ಥಳಕ್ಕೆ ಇನ್ನಿಬ್ಬರು ಪೊಲೀಸರು ಆಗಮಿಸಿದ್ರು. ಅವರಲ್ಲೊಬ್ಬ ಅಧಿಕಾರಿ ಆ ಯುವಕನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿಬಿಟ್ಟಿದ್ದ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...