alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೇ ನಂಬಿ ಬಿಟ್ರೆ ಬಿಡಿ! ಇಂತಹ ಕೆಲಸಗಳನ್ನೂ ಮಾಡ್ತಿದ್ದಾರೆ ಜನ

ಜಗತ್ತಿನಲ್ಲಿ ಕೆಲಸಕ್ಕೇನು ಕಡಿಮೆ ಇಲ್ಲ. ಮಾಡುವ ಮನಸ್ಸಿರಬೇಕಷ್ಟೆ. ಈಗ ನಾವು ಕೆಲವೊಂದು ಕೆಲಸದ ಬಗ್ಗೆ ಹೇಳ್ತೇವೆ. ಅದನ್ನು ನೀವು ಕೇಳಿ, ಅಬ್ಬಾ ! ಇಂತಹ ಕೆಲಸವನ್ನೂ ಜನ ಮಾಡ್ತಾರಾ ಅಂತಾ ಕೇಳಬೇಡಿ. ಕಾನೂನು ರೀತಿಯೋ, ಕಾನೂನು ಬಾಹಿರವೋ ಅಂತಹ ಕೆಲಸ ಮಾಡುವವರು ಲಕ್ಷಾಂತರ ರೂಪಾಯಿ ಬಾಚಿಕೊಳ್ತಾರೆ ಎಂಬುದು ನಿಮಗೆ ತಿಳಿದಿರಲಿ.

ಅಪಹರಣ ಸೇವೆ : ಫ್ರಾನ್ಸ್ ನ ಕಂಪನಿಯೊಂದು ಅಪಹರಣ ಸೇವೆ ಮಾಡುತ್ತೆ. ನಿಜ. ಸ್ವತಃ ಅಪಹರಣಕ್ಕೊಳಗಾಗುವ ಇಚ್ಛೆಯುಳ್ಳವರು ಕಂಪನಿಗೆ ತಿಳಿಸಬೇಕು. ಅವರು ಹಣ ಪಡೆದು ವ್ಯಕ್ತಿಯನ್ನು ಅಪಹರಿಸುತ್ತಾರೆ.

ಮಲದ ವಾಸನೆ ಪಡೆಯುವ ಕೆಲಸ : ವಿಚಿತ್ರವಾದ್ರೂ ಇದು ಸತ್ಯ. ಚೀನಾದಲ್ಲಿ ಇಂತಹದ್ದೊಂದು ಕೆಲಸವಿದೆ. ವೈದ್ಯರು ರೋಗಿಯ ಮಲದ ವಾಸನೆ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಾರೆ. ಹಾಗಾಗಿ ರೋಗಿಗಳ ಮಲದ ವಾಸನೆ ತೆಗೆದುಕೊಳ್ಳುವ ಕೆಲಸವನ್ನು ಕೆಲವರು ಮಾಡ್ತಾರೆ. ಈ ಕೆಲಸಗಾರರಿಗೆ ಒಳ್ಳೆಯ ಸಂಬಳ ಸಿಗುತ್ತೆ.

ಸೆಕೆಂಡ್ ಹ್ಯಾಂಡ್ ಒಳ ಉಡುಪು ಮಾರಾಟ : ಯಸ್. ವಸ್ತುಗಳ ಸೆಕೆಂಡ್ ಹ್ಯಾಂಡ್ ಮಾರಾಟ ಕೇಳಿದ್ದೇವೆ. ಆದ್ರೆ ಮಹಿಳೆಯರ ಒಳ ಉಡುಪಿನ ಸೆಕೆಂಡ್ ಹ್ಯಾಂಡ್ ಮಾರಾಟವೂ ಇದೆ. ಅನೇಕರು ಹೊಸದನ್ನು ಮಾಡಲು ಬಳಸಿದ ಒಳ ಉಡುಪೊಂದೇ ಅಲ್ಲ, ಕೊಳಕಾದ ಒಳ ಉಡುಪನ್ನೂ ಖರೀದಿಸುತ್ತಿದ್ದಾರೆ. ಇಂಟರ್ ನೆಟ್ ನಲ್ಲಿ ಇದರ ಮಾರಾಟ ಜೋರಾಗಿದೆ.

ಮೃತರ ಚಿತಾಭಸ್ಮದಿಂದ ಮೂರ್ತಿ : ಸತ್ತ ನಂತರವೂ ಆಪ್ತರನ್ನು ಜೊತೆಗಿಟ್ಟುಕೊಳ್ಳಬಯಸುವವರು ಹೀಗೆ ಮಾಡಬಹುದು. ಸತ್ತವರ ಬೂದಿಯನ್ನು ತಂದು ಕೊಟ್ಟರೆ ಸಾಕು. ಅದರಿಂದ ನಿಮ್ಮ ಆಪ್ತರ ಮೂರ್ತಿ ಮಾಡಿಕೊಡುವವರು ಇದ್ದಾರೆ. ಅವರಿಗೆ ಹಣ ನೀಡಬೇಕಾಗುತ್ತದೆ.

ಕಪಾಳ ಮೋಕ್ಷದ ಮಸಾಜ್ : ಸೌಂದರ್ಯ ವೃದ್ಧಿಗಾಗಿ ನ್ಯೂಯಾರ್ಕ್ ನಲ್ಲಿ ಕಪಾಳ ಮೋಕ್ಷದ ಮಸಾಜ್ ಜನಪ್ರಿಯವಾಗಿದೆ. ಕಪಾಳ ಮೋಕ್ಷ ಮಾಡಿ ಮಸಾಜ್ ಮಾಡಲು ಜನರು 350 ಡಾಲರ್ ನಿಂದ 1 ಸಾವಿರ ಡಾಲರ್ ವರೆಗೆ ಪಡೆಯುತ್ತಿದ್ದಾರೆ.

ಟಿವಿ ಯಲ್ಲಿ ನಮ್ಮನ್ನು ತೋರಿಸುವುದು : ದಕ್ಷಿಣ ಕೊರಿಯಾ ಚಾನೆಲ್ಲೊಂದು ಆಹಾರ ಸೇವಿಸುವಾಗ ಜನರಿಗೆ ವಿಡಿಯೋ ತೋರಿಸುವ ಕೆಲಸ ಮಾಡ್ತಾ ಇದೆ. ರೆಸ್ಟೋರೆಂಟ್ ಅಥವಾ ಮನೆಯಲ್ಲಿ ಆಹಾರ ಸೇವಿಸುತ್ತಿರುವಾಗ ಅದು ಟಿವಿಯಲ್ಲಿ ಪ್ರಸಾರವಾಗುತ್ತದೆ. ಇದರಿಂದ ಚಾನೆಲ್ ಮಾಲೀಕ ಒಂದು ತಿಂಗಳಿಗೆ 6 ಲಕ್ಷ 75 ಸಾವಿರ ಆದಾಯ ಪಡೆಯುತ್ತಿದ್ದಾನೆ.

ರಹಸ್ಯ ಶಾಪಿಂಗ್ : ಆನ್ಲೈನ್ ನಲ್ಲಿ ಯಾವ ವಸ್ತು ಬೇಕು ಎಂಬುದನ್ನು ನೋಡಿ ಅದಕ್ಕೆ ಹಣ ಕಟ್ಟಿ ಖರೀದಿ ಮಾಡುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಇಲ್ಲಿ ಉಲ್ಟಾ. ನೀವು ಹಣ ಕಟ್ಟುತ್ತೀರಾ. ಮನೆಗೆ ಬರುವ ಸಾಮಾನಿನ ಬಗ್ಗೆ ಮಾತ್ರ ತಿಳಿದಿರುವುದಿಲ್ಲ. ಮನೆಗೆ ಬಂದ ಬಾಕ್ಸ್ ಬಿಚ್ಚಿ ನೋಡಿದಾಗಲೇ ನಿಮಗೆ ಗೊತ್ತಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...