alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನ ಸಿದ್ಧತೆ ಮಾಡುವ ಜಪಾನ್ ಹಬ್ಬ

ಜಪಾನ್ ಮಂದಿಯೆಲ್ಲಾ ಸಾವಿಗೆ ಸಜ್ಜಾಗ್ತಿದ್ದಾರೆ. ಅಚ್ಚರಿಯಾದ್ರೂ ಇದು ಸತ್ಯ. ಅಂತ್ಯಸಂಸ್ಕಾರದ ಜಾತ್ರೆಗಳು ಮತ್ತು ಎಂಡ್ ಆಫ್ ಲೈಫ್ ಸೆಮಿನಾರ್ ಗಳೆಲ್ಲ ಜಪಾನ್ ನಲ್ಲಿ ಹೊಸ ಟ್ರೆಂಡ್ ಆಗಿಬಿಟ್ಟಿವೆ.

ಸಾಂಪ್ರದಾಯಿಕ ಮತ್ತು ಹೈಟೆಕ್ ಸೇವೆಗಳೆರಡೂ ಇಲ್ಲಿ ಸಿಗುತ್ತವೆ. ಪ್ರತಿ ವರ್ಷ ಡಿಸೆಂಬರ್ 16ರಂದು ‘ಶುಕಾತ್ಸು’ ಎಂಬ ಹಬ್ಬ ಆಚರಿಸಲಾಗುತ್ತದೆ. ಇದರಲ್ಲಿ ಭಾಗವಹಿಸುವವರೆಲ್ಲ ತಮ್ಮ ಅಂತ್ಯಸಂಸ್ಕಾರದ ಉಡುಪನ್ನು ಆಯ್ಕೆ ಮಾಡಿಕೊಳ್ತಾರೆ.

ಅದನ್ನು ಧರಿಸಿ ಹೂಗಳಿಂದ ಅಲಂಕೃತವಾದ ಶವಪೆಟ್ಟಿಗೆಯಲ್ಲಿ ಮಲಗಿಕೊಳ್ತಾರೆ. ಒಳಾಂಗಣದಲ್ಲೇ ತಮ್ಮ ಅಂತ್ಯಸಂಸ್ಕಾರಕ್ಕೆ ಸ್ಥಳವನ್ನು ಕೂಡ ಖರೀದಿ ಮಾಡಬಹುದು. ಮುಂದಿನ 50 ವರ್ಷಗಳಲ್ಲಿ 30 ಮಿಲಿಯನ್ ನಷ್ಟು ಜನಸಂಖ್ಯೆ ಕಡಿಮೆಯಾಗಲಿದೆ ಅನ್ನೋದು ಜಪಾನ್ ಲೆಕ್ಕಾಚಾರ.

ಅಂತ್ಯಸಂಸ್ಕಾರ, ಸ್ಮಶಾನ, ಶವಪೆಟ್ಟಿಗೆಗಳಿಗೆ ಮಾರುಕಟ್ಟೆ ಕುಸಿಯಬಹುದು ಅನ್ನೋದು ವ್ಯಾಪಾರಿಗಳ ಆತಂಕ. ಅದಕ್ಕಾಗಿ ಈ ರೀತಿಯ ವಿಚಿತ್ರ ಫೆಸ್ಟ್ ಆಯೋಜಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...