alex Certify
ಕನ್ನಡ ದುನಿಯಾ       Mobile App
       

Kannada Duniya

500 ಕೆ.ಜಿ. ತೂಕವಿದ್ದಾಳೆ ಈಜಿಪ್ಟ್ ನ ಈ ಮಹಿಳೆ..!

weight-womenಆಧುನಿಕ ಜೀವನ ಶೈಲಿಯಿಂದಾಗಿ ಬಹುತೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಪೈಕಿ ಸ್ಥೂಲಕಾಯವೂ ಒಂದು ಬಹು ದೊಡ್ಡ ಸಮಸ್ಯೆಯಾಗಿದೆ. ಆದರೆ ಸ್ಥೂಲಕಾಯ ಆಹಾರ ಪದ್ದತಿಯಿಂದ ಮಾತ್ರವಲ್ಲ ಶರೀರದಲ್ಲಿನ ಕೆಲ ನ್ಯೂನ್ಯತೆಗಳ ಕಾರಣಕ್ಕೂ ಕಾಣಿಸಿಕೊಳ್ಳಬಹುದೆಂಬುದಕ್ಕೆ ಈಜಿಪ್ಟ್ ನ ಈ ಮಹಿಳೆಯೇ ಉದಾಹರಣೆ.

36 ವರ್ಷದ ಇಮಾನ್ ಅಹ್ಮದ್ ಅಬ್ದುಲಾತಿ ಬರೋಬ್ಬರಿ 500 ಕೆ.ಜಿ. ತೂಕವಿದ್ದಾರೆ. ತಮ್ಮ ಸ್ಥೂಲಕಾಯದ ಸಮಸ್ಯೆಯಿಂದಾಗಿ ಅವರು ಕಳೆದ 25 ವರ್ಷಗಳಿಂದ ಮನೆಯಾಚೆಯಿಂದ ಹೋಗಿಲ್ಲ. ಹಾಗೆಂದು ಅವರೇನೋ ಸಿಕ್ಕಾಪಟ್ಟೆ ಆಹಾರ ತಿಂದು ತೂಕ ಪಡೆದುಕೊಂಡಿಲ್ಲ.

ಅವರ ಆರೋಗ್ಯ ಸಮಸ್ಯೆಯ ಕಾರಣಕ್ಕಾಗಿ ದೇಹ ಈ ರೀತಿ ಬೆಳೆದಿದೆ. ತಮ್ಮ ಹೆಚ್ಚಿದ ತೂಕದ ಕಾರಣದಿಂದ ಸ್ವತಃ ಯಾವುದೇ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಾಗದ ಇಮಾನ್ ಅಹ್ಮದ್ ಅಬ್ದುಲಾತಿ, ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ತಾಯಿ ಮತ್ತು ಸಹೋದರಿಯ ಮೇಲೆ ಅವಲಂಬಿತರಾಗಿದ್ದಾರೆ. ಈಕೆಯೇ ವಿಶ್ವದ ಅತಿ ತೂಕದ ಮಹಿಳೆಯೆಂದು ಹೇಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...