alex Certify
ಕನ್ನಡ ದುನಿಯಾ       Mobile App
       

Kannada Duniya

ಎದ್ದು ಬಿದ್ದು ಓಡಿದ್ರು ಫೋಟೋಶೂಟ್ ಮಾಡಿಸಿಕೊಳ್ತಿದ್ದ ವಧು-ವರ

ಎಲ್ಲರ ಜೀವನದಲ್ಲಿಯೂ ಮದುವೆ ಒಂದು ಮರೆಯಲಾಗದ ಸವಿನೆನಪು. ಆದರೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ ಹೊಸದಾಗಿ ಮದುವೆಯಾದ ದಂಪತಿಗೆ ಪೋಟೊಶೂಟ್ ವೇಳೆ ಜೀವನದಲ್ಲಿ ಮರೆಯಲಾಗದ ಘಟನೆಯೊಂದು ನಡೆದಿದೆ.

ಗ್ಲನ್ ಮ್ಯಾಕ್ಕೀ (27), ಆಮಿ ಮ್ಯಾಕ್ಕೀ (24) ಹೊಸದಾಗಿ ಮದುವೆಯಾದ ಈ ದಂಪತಿಗೆ ಮದುವೆಯ ಪೋಟೋಶೂಟ್ ತೆಗೆಯಲು ಪೋಟೋಗ್ರಾಫರ್ ಒಂದು ಬೆಟ್ಟದ ತುದಿಗೆ ಹೋಗಲು ಹೇಳಿದ್ದಾನೆ. ಹಾಗೇ ಅಲ್ಲಿ ಒಂದು ಕುದುರೆ ಜೊತೆ ಬೆಟ್ಟದ ತುದಿಯಲ್ಲಿ ಸುತ್ತಾಡಲು ಹೇಳಿದ್ದಾನೆ. ಪೋಟೋಗ್ರಾಫರ್ ಹೇಳಿದಂತೆ ಬೆಟ್ಟದ ತುದಿಗೆ ಹೋದ ಈ ದಂಪತಿಗೆ ಒಂದು ಶಾಕ್ ಎದುರಾಗಿತ್ತು.

ಅದೇನೆಂದರೆ ಪೋಟೋಶೂಟ್ ವೇಳೆ ಈ ದಂಪತಿಗಳಿಗೆ ಬೆಟ್ಟದ ತುದಿಯಿಂದ ಸಿಟ್ಟಿನಿಂದ ಓಡಿಬರುತ್ತಿರುವ ಎತ್ತು ಕಂಡಿದೆ. ಅದು ತಮ್ಮ ಕಡೆಗೆ ಬರುತ್ತಿರುವುದನ್ನು ನೋಡಿದ ವಧು ಆಮಿ ತನ್ನ ಬಟ್ಟೆಯನ್ನು ಎತ್ತಿಕೊಂಡು ಓಡಲು ಪ್ರಾರಂಭಿಸಿದ್ದಾಳೆ. ಆಗ ಆಕೆಯ ಡ್ರೆಸ್ ಗಾಳಿಯಲ್ಲಿ ಹಾರಾಡುತ್ತಿತ್ತು. ಅದನ್ನು ಫೊಟೋಗ್ರಾಫರ್ ಶೂಟ್ ಮಾಡಿದ್ದಾನೆ. ಅಲ್ಲದೇ ತಮ್ಮ ಜೀವನದಲ್ಲಿ ಮರೆಯಲಾಗದ ಈ ಘಟನೆಯ ನೆನಪಿಗಾಗಿ ಆ ಫೋಟೋವನ್ನು ದಂಪತಿಗಳು ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...