alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳು ಪೋರ್ನ್ ಸೈಟ್ ವೀಕ್ಷಿಸದಂತೆ ತಡೆಗಟ್ಟುವುದು ಹೇಗೆ…?

child website

ಮಾಹಿತಿ ಪಡೆಯುವ ಸಲುವಾಗಿ ಅಂತರ್ಜಾಲವನ್ನು ಇಂದು ಕಿರಿಯರಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಬಳಸುತ್ತಾರೆ. ಆದರೆ ಮಕ್ಕಳು ಅಂತರ್ಜಾಲ ತಾಣ ಬಳಸುವ ವೇಳೆ ಕೆಲವೊಮ್ಮೆ ಅಶ್ಲೀಲ ಚಿತ್ರಗಳು ಅಥವಾ ವೆಬ್ ಸೈಟ್ ಗಳು ತೆರೆದುಕೊಳ್ಳುವ ಕಾರಣ ಪೋಷಕರು ಆತಂಕದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆ.

ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಗಳಲ್ಲಿ ಇದಕ್ಕಾಗಿ ಫಿಲ್ಟರ್ ಗಳಿದ್ದು, ಸೆಟ್ಟಿಂಗ್ಸ್ ಗೆ ಹೋಗಿ ಸೆಟ್ ಮಾಡಿದರೆ ಇದನ್ನು ತಡೆಗಟ್ಟಬಹುದಾಗಿದೆ. ಆದರೆ ಇಂದು ಮೊಬೈಲಿನಲ್ಲಿಯೇ ಬಹಳಷ್ಟು ಮಂದಿ ಇಂಟರ್ನೆಟ್ ಬಳಸುತ್ತಿರುವ ಕಾರಣ ಮೊಬೈಲುಗಳಲ್ಲಿ ಕೆಲ ಅಪ್ಲಿಕೇಶನ್ ಗಳನ್ನು ಅಳವಡಿಸಿಕೊಂಡರೆ ಮಕ್ಕಳು ಇಂತಹ ವೆಬ್ ಸೈಟ್ ಪ್ರವೇಶಿಸುವುದನ್ನು ನಿರ್ಬಂಧಿಸಬಹುದಾಗಿದೆ.

ಅಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಹಲವು ಅಪ್ಲಿಕೇಶನ್ ಗಳು ಇದಕ್ಕಾಗಿ ಲಭ್ಯವಿದ್ದು, ಇವುಗಳನ್ನು ಅಳವಡಿಸಿದರೆ ಮಕ್ಕಳು ವಯಸ್ಕರ ವೆಬ್ ಸೈಟ್ ಪ್ರವೇಶಿಸುವುದನ್ನು ತಡೆಗಟ್ಟಬಹುದಾಗಿದೆ. ಅಲ್ಲದೇ ಪಾಲಕರಿಗೆ ಗೊತ್ತಿಲ್ಲದಂತೆ ಮಕ್ಕಳು ಇಂತಹ ವೆಬ್ ಸೈಟ್ ನೋಡಲು ಮುಂದಾದರೆ ಪಾಲಕರಿಗೆ ಎಚ್ಚರಿಕೆ ಸಂದೇಶ ಬರುವ ವ್ಯವಸ್ಥೆಯೂ ಕೆಲ ಅಪ್ಲಿಕೇಶನ್ ಗಳಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...