alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಯುವತಿಯನ್ನು ವಿವಾಹವಾಗಿದ್ದ ಪಾಕಿಸ್ತಾನಿ ಗಡಿಪಾರು

27 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿದ್ದ ಸಿರಾಜ್ ಖಾನ್ ಹಾಗೂ ಆತನ ಪತ್ನಿ ಸಾಜಿದಾ ಪಠಾಣ್ ಳನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ. 2005ರಲ್ಲಿ ಸಿರಾಜ್ ಹಾಗೂ ಸಾಜಿದಾ ಮದುವೆಯಾಗಿದ್ದರು. ಸಿರಾಜ್ ಮೂಲತಃ ಪಾಕಿಸ್ತಾನದವನು.

2009ರಲ್ಲಿ ಪಾಕಿಸ್ತಾನಕ್ಕೆ ತೆರಳಲು ವೀಸಾ ಬೇಕೆಂದು ಆತ ಪೊಲೀಸರ ಮೊರೆಹೋಗಿದ್ದ. ಆಗ ಅವನ ರಾಷ್ಟ್ರೀಯತೆ ಯಾವುದು ಎಂಬುದನ್ನೆಲ್ಲಾ ಪೊಲೀಸರು ತನಿಖೆ ಮಾಡಿದ್ರು. ಸೂಕ್ತ ದಾಖಲೆಗಳನ್ನು ಒದಗಿಸುವಲ್ಲಿ ಆತ ವಿಫಲನಾಗಿದ್ದರಿಂದ ಕೇಸ್ ದಾಖಲಾಯ್ತು.

2014ರಲ್ಲಿ ಆತನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. 2 ತಿಂಗಳು ಸೆರೆವಾಸ ಮಾಡಿದ್ದ ಆತನನ್ನು ಪೊಲೀಸರು ಬಿಡುಗಡೆ ಮಾಡಿದ್ರು, ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿದ್ದರು. ಆದ್ರೆ ನಂತರ ಸಿರಾಜ್ ಪೊಲೀಸ್ ಠಾಣೆಗೆ ಮರಳಿ ಬರಲೇ ಇಲ್ಲ.

ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಆತನನ್ನು 2017ರ ಡಿಸೆಂಬರ್ 5ರಂದು ಅರೆಸ್ಟ್ ಮಾಡಲಾಯ್ತು. 3 ತಿಂಗಳು ಲಾಕಪ್ಪಿನಲ್ಲಿದ್ದ ಆತನನ್ನು ಬಿಡುಗಡೆ ಮಾಡಿದ ಪೊಲೀಸರು, ಪಾಕಿಸ್ತಾನಕ್ಕೆ ಗಡಿಪಾರು ಮಾಡಿದ್ದಾರೆ. ಮದುವೆ ನಂತರ ಭಾರತೀಯ ನಾಗರಿಕತ್ವ ಸಿಗಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದ ಸಿರಾಜ್ ಹಾಗೂ ಸಾಜಿದಾ ಈಗ ಪಾಕಿಸ್ತಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...