alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುದ್ದಿ ಓದಿದ್ಮೇಲೆ ನೀವು ಮೆಕ್ ಡೊನಾಲ್ಡ್ಸ್ ನಲ್ಲಿ ಐಸ್ ಕ್ರೀಂ ತಿನ್ನೊಲ್ಲ!

612152-mc-donalds

ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಗೊತ್ತಿದ್ರೂ ನಾವೆಲ್ಲ ಅದನ್ನೇ ಇಷ್ಟಪಟ್ಟು ತಿನ್ನುತ್ತೇವೆ. ಅದರಲ್ಲೂ ಮೆಕ್ ಡೊನಾಲ್ಡ್ಸ್ ನಲ್ಲಿ ಬರ್ಗರ್, ಫ್ರೈಸ್ ಹಾಗೂ ಐಸ್ ಕ್ರೀಂ ಅಂದ್ರೆ ಪಂಚಪ್ರಾಣ. ಆದ್ರೆ ಈ ಸುದ್ದಿ ನೋಡಿದ್ಮೇಲೆ ನೀವು ಮೆಕ್ ಡೊನಾಲ್ಡ್ಸ್ ನಲ್ಲಿ ಇನ್ಮೇಲೆ ಅಪ್ಪಿತಪ್ಪಿಯೂ ಐಸ್ ಕ್ರೀಂ ತಿನ್ನೋದಿಲ್ಲ.

ಅಮೆರಿಕದ ಲೂಸಿಯಾನಾ ನಿವಾಸಿ ನಿಕ್ ಎಂಬಾತ ಈ ಮೊದಲು ಮೆಕ್ ಡೊನಾಲ್ಡ್ಸ್ ನಲ್ಲಿ ಕೆಲಸ ಮಾಡ್ತಾ ಇದ್ದ. ಮೆಕ್ ಡೊನಾಲ್ಡ್ಸ್ ಐಸ್ ಕ್ರೀಂ ಮಷಿನ್ ನಲ್ಲಿದ್ದ ಟ್ರೇ ಒಂದರ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ. ಅದರಲ್ಲಿ ಎಷ್ಟು ಕೊಳಕಿದೆ ಅಂದ್ರೆ, ಚರಂಡಿಯಂತೆ ಕಾಣ್ತಿದೆ.

ಟ್ರೇ ತುಂಬಾ ಕೊಳಕು ಪಾಚಿಗಟ್ಟಿ ನಿಂತಿದೆ. ಅದನ್ನು ನೋಡಿದ್ರೆ ಎಂಥವರಿಗೆ ಕೂಡ ಇನ್ನು ಜನ್ಮದಲ್ಲಿ ಐಸ್ ಕ್ರೀಂ ಬೇಡ ಎನ್ನುವಷ್ಟು ಅಸಹ್ಯ ಹುಟ್ಟಿದೆ. ನಿಕ್ ಮಾಡಿರೋ ಟ್ವೀಟ್ ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಈ ಫೋಟೋವನ್ನು 13,000 ಬಾರಿ ರಿಟ್ವೀಟ್ ಮಾಡಲಾಗಿದೆ.

ಮೆಕ್ ಡೊನಾಲ್ಡ್ಸ್ ನ ಕಹಿ ಸತ್ಯವನ್ನು ಜನರ ಮುಂದೆ ಬಿಚ್ಚಿಡಬೇಕು ಅಂತಾ ನಿಕ್ ಸಿದ್ಧತೆ ಮಾಡ್ಕೊಂಡಿದ್ದ. ಈ ವಿಚಾರ ಗೊತ್ತಾಗ್ತಿದ್ದಂತೆ ಅವನನ್ನು ಕೆಲಸದಿಂದ ತೆಗೆದು ಹಾಕಲು ತಯಾರಿ ನಡೆದಿತ್ತು. ಕೊನೆಗೆ ಬೇರೆ ಕಡೆ ಕೆಲಸ ಸಿಕ್ಕಿದ ತಕ್ಷಣ, ಮೆಕ್ ಡೊನಾಲ್ಡ್ಸ್ ಐಸ್ ಕ್ರೀಂ ಬಣ್ಣವನ್ನು ನಿಕ್ ಬಯಲು ಮಾಡಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...