alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಣದ ಪ್ರತಿಮೆಗೆ ಮುತ್ತಿಡಲು ಹೋದಾಗ ಏನಾಯ್ತು ಗೊತ್ತಾ?

ಸುಂದರವಾದ ವಸ್ತುಗಳು ನಮ್ಮನ್ನು ಆಕರ್ಷಿಸೋದು ಸಾಮಾನ್ಯ.  ಕೆಲವೊಂದು ವಸ್ತುಗಳನ್ನು ಮತ್ತೆ ಮತ್ತೆ ನೋಡಬೇಕು ಎನ್ನಿಸೋದು ಸಹಜ. ಈ ವ್ಯಕ್ತಿ ಕೂಡ ಗೊಂಬೆ ಸೌಂದರ್ಯಕ್ಕೆ ಮಾರು ಹೋಗಿದ್ದಾನೆ. ಗೊಂಬೆಗೆ ಮುತ್ತಿಡಲು ಮುಂದಾಗಿದ್ದಾನೆ. ಆದ್ರೆ ಅಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬ ಸುಂದರ ಪ್ರತಿಮೆಯನ್ನು ನೋಡ್ತಾನೆ. ಮೇಣದ ಪ್ರತಿಮೆಯಂತಿರುವ ಹುಡುಗಿ ನೋಡಿ ಆತ ನಿಯಂತ್ರಣ ತಪ್ಪುತ್ತಾನೆ. ಏನಾದ್ರೂ ಸರಿ ಒಂದು ಮುತ್ತು ನೀಡೋಣ ಅಂತ ಹತ್ತಿರಕ್ಕೆ ಹೋಗ್ತಾನೆ. ಹುಡುಗ ಪ್ರತಿಮೆ ಹತ್ತಿರಕ್ಕೆ ಹೋಗಿ ಇನ್ನೇನು ಮುತ್ತು ನೀಡಬೇಕು. ಅಷ್ಟರಲ್ಲೇ ಯಡವಟ್ಟು ನಡೆದು ಹೋಗುತ್ತೆ.

ಹತ್ತಿರ ಬಂದ ವ್ಯಕ್ತಿ ನೋಡಿ ಪ್ರತಿಮೆಯಂತೆ ನಿಂತಿದ್ದ ಹುಡುಗಿ ತಿರುಗಿ ಬಿಡ್ತಾಳೆ. ಈವರೆಗೂ ಗೊಂಬೆ ಎಂದುಕೊಂಡಿದ್ದ ಆತನಿಗೆ ಜೀವಂತ ಹುಡುಗಿ ಎಂಬುದು ಗೊತ್ತಾಗಿ ಆಶ್ಚರ್ಯವಾಗುತ್ತದೆ. ಈ ಹಾಸ್ಯಾಸ್ಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...