alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕಡಿಸುತ್ತಿದ್ದ ಟ್ರಕ್ ಡ್ರೈವರ್ ಮಾಡಿದ್ದ ದೊಡ್ಡ ಅನಾಹುತ

ನಿದ್ರೆಯ ಮಂಪರಿನಲ್ಲಿ ಟ್ರಕ್ ಚಲಾಯಿಸುತ್ತಿದ್ದ ಡ್ರೈವರ್ ಯಡವಟ್ಟಿನಿಂದ ವಿಟಮಿನ್ ವಾಟರ್ ಬಾಟಲ್ ಗಳಿಂದ ತುಂಬಿದ್ದ ಟ್ರಕ್ ಅಪಘಾತಕ್ಕೀಡಾಗಿದೆ.

ಅಮೆರಿಕದ ಟೆಕ್ಸಾಸ್ ನ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಿಂದಾಗಿ 18 ಚಕ್ರಗಳ ಭಾರೀ ಗಾತ್ರದ ಸರಕು ಸಾಗಣೆ ವಾಹನದಲ್ಲಿದ್ದ  ವಿಟಮಿನ್ ವಾಟರ್ ಬಾಟಲ್ ಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಥಳಕ್ಕೆ ಬಂದ ಪೊಲೀಸರು ಟ್ರಕ್ ಚಾಲಕನನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅದೃಷ್ಟವಶಾತ್ ಘಟನೆಯಲ್ಲಿ ಟ್ರಕ್ ಚಾಲಕನಿಗೆ ಪ್ರಾಣಾಪಾಯವಾಗಿಲ್ಲ. ಈ ವಿಚಾರವನ್ನ ಪೊಲೀಸ್ ಇಲಾಖೆಯ ವೆಬ್ ಸೈಟ್ ನಲ್ಲಿ ಫೋಟೋಗಳೊಂದಿಗೆ ಶೇರ್ ಮಾಡಿರುವ ಪೊಲೀಸರು, ಟ್ರಕ್ ಚಾಲಕರಿಗೆ ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ. ಒಂದು ಟ್ರಿಪ್ ನ ಬಳಿಕ ಹೆಚ್ಚು ವಿಶ್ರಾಂತಿ ಪಡೆಯಿರಿ ಅಂತ ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...