alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದ ಅತಿ ದೊಡ್ಡ ‘ಸಮಸ್ಯೆ’ ಏನು ಗೊತ್ತಾ…?

ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆಯಿದೆ. ಆದರೆ ಅದಕ್ಕಿಂತ ದೊಡ್ಡ ಸಮಸ್ಯೆ ಎಂದರೆ ನೀರಿನ ಸಮಸ್ಯೆ ಎಂದು ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ದೇಶವನ್ನು ಕಾಡುತ್ತಿರುವ ನೀರಿನ ಸಮಸ್ಯೆಯನ್ನು ನಿವಾರಿಸಬೇಕಿದ್ದು, ಈ ನಿಟ್ಟಿನಲ್ಲಿ ದೇಶದಲ್ಲಿ ಜಲಾಶಯಗಳನ್ನು ನಿರ್ಮಿಸಬೇಕಿದೆ ಎಂದು ಹೇಳಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ದೇಶದಲ್ಲಿರುವ ಜಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೂತನ ಜಲಾಶಯ ನಿರ್ಮಿಸುವ ಅನಿವಾರ್ಯತೆಯಿದೆ. ಆದರೆ ಇದಕ್ಕಾಗಿ ವಿದೇಶಗಳಿಂದ ಮತ್ತೊಂದು ಸಾಲ ಪಡೆಯುವುದಕ್ಕಿಂತ, ನಮ್ಮ ಸ್ವಂತ ಬಲದಲ್ಲಿ ಜಲಾಶಯ ಕಟ್ಟಬೇಕು. ಇದಕ್ಕಾಗಿ ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿಗಳು ನೆರವಾಗಬೇಕು. ಪ್ರತಿಯೊಬ್ಬ ಪ್ರಜೆ ದೇಣಿಗೆ ನೀಡಿದರೆ ಡ್ಯಾಮ್ ನಿರ್ಮಾಣ ಸಾಧ್ಯವೆಂದು ಹೇಳಿದ್ದಾರೆ.

ಪಾಕಿಸ್ತಾನ ರಚನೆಯಾದಾಗ, ಪ್ರತಿಯೊಬ್ಬ ಪಾಕಿಸ್ತಾನಿಗೆ 5600 ಕ್ಯುಬಿಕ್ ಮೀಟರ್ ಬಳಸುವಷ್ಟು ಅವಕಾಶವಿತ್ತು. ಆದರೆ ಇಂದು ಇದರ ಪ್ರಮಾಣ ಒಂದು ಸಾವಿರಕ್ಕೆ ಇಳಿದಿದೆ. ಇದು ಹೀಗೆ ಮುಂದುವರಿದರೆ, ಮುಂದೊಂದು ದಿನ ಭಾರಿ ಗಂಡಾಂತರ ಎದುರಾಗಲಿದೆ. ದೇಶದ ಆರ್ಥಿಕ ತೊಂದರೆಯಿಂದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಅದಕ್ಕಿಂತ ನೀರಿನ ಸಮಸ್ಯೆ ದೊಡ್ಡದಾಗಿದೆ. ಆದ್ದರಿಂದ ದೇಶದಲ್ಲಿರುವ ನೀರಿನ ಸಮಸ್ಯೆ ಮೊದಲು ಪರಿಹಾರ ಕಂಡುಕೊಳ್ಳಬೇಕಿದೆ ಎಂದಿದ್ದಾರೆ.

ಜಲಾಶಯಗಳ ನಿರ್ಮಾಣಕ್ಕಾಗಿ ವಿದೇಶದಲ್ಲಿ ನೆಲೆಸಿರುವ ನಮ್ಮ ಪ್ರಜೆಗಳು ಸಹಾಯ ಮಾಡಿದರೆ, ಸಮಸ್ಯೆ ಪರಿಹರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...