alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಸಾಂಗ್ ಗೆ ವಿದೇಶಿಯರ ಬಿಂದಾಸ್ ಡಾನ್ಸ್

ಬೇರೆ ಊರಿಗೆ ಹೋದಾಗ ನಮ್ಮ ಜನ ಸಿಕ್ಕಾಗ ಆಗುವ ಸಂತಸಕ್ಕೆ ಪಾರವೇ ಇರುವುದಿಲ್ಲ. ನ್ಯೂಯಾರ್ಕ್ ನಲ್ಲಿರುವ ಭಾರತೀಯರಿಗೂ ಇಂತಹ ವಿಶಿಷ್ಟ ಅನುಭವ ಆಗಿದೆ. ಎಸ್…. ಕ್ಯೂ ಪಾರ್ಕ್ ಖ್ಯಾತಿಯ ಅಮೆರಿಕನ್, ಕೊರಿಯನ್ ಡ್ಯಾನ್ಸರ್ ನ್ಯೂಯಾರ್ಕ್ ಬೀದಿಗಳಲ್ಲಿ ಬಾಲಿವುಡ್ ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ.

ಕ್ಯೂ ಪಾರ್ಕ್ ಜನರ ಮಧ್ಯೆ ಡ್ಯಾನ್ಸ್ ಮಾಡ್ತಾ ಇದ್ರೆ, ಎಲ್ಲರೂ ಚಕಿತರಾಗಿದ್ದಾರೆ. ಈ ಬಾರಿ ಇವರು ಬಾಲಿವುಡ್ ನ ಸೂಪರ್ ಸಾಂಗ್ ಗಳಿಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಹೌದು, ‘ಚೋಲೆ ಕೆ ಪೀಚೆ ಕ್ಯಾ ಹೆ’ ಸಾಂಗ್ ಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ಮನರಂಜಿಸಿದ್ದಾರೆ.

ಈ ವಿಡಿಯೋ ಕಳೆದ ಆರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡ್ತಾ ಇದೆ. ಮೂರೂವರೆ ನಿಮಿಷದ ವಿಡಿಯೋ ಭಾರತೀಯರ ಮನ ಗೆಲ್ಲುತ್ತಿದೆ. ಈ ಡ್ಯಾನ್ಸ್ ನಲ್ಲಿ ಕ್ಯೂ ಪಾರ್ಕ್ ತಂಡ, ಬಾಲಿವುಡ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕಿದೆ. ಪ್ರೇಮ ರತನ್ ಧನ್ ಪಾಯೋ, ಧೂಮ್, ಸಾಂಗ್ ಗಳಿಗೆ ಹೆಜ್ಜೆ ಹಾಕಿದ್ದಾರೆ.

ವಿಡಿಯೋ ಅಪ್ ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಸದ್ಯ ಯೂಟ್ಯೂಬ್ ನಲ್ಲಿ ಆರು ಲಕ್ಷ ಜನ ಈ ವಿಡಿಯೋ ನೋಡಿ ಎಂಜಾಯ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ 30 ಲಕ್ಷ ಜನ ಈ ವಿಡಿಯೋ ನೋಡಿದ್ದು, 51 ಸಾವಿರ ಮಂದಿ ಶೇರ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...