alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಆಗಮಿಸಿದ ಅತಿಥಿಗಳ ಮೇಲೆ ಹಣದ ಸುರಿಮಳೆ

ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆದ ಮದುವೆಯೊಂದರಲ್ಲಿ ಅತಿಥಿಗಳಿಗೆ ಹಣ, ಮೊಬೈಲ್ ಸೇರಿದಂತೆ ಉಡುಗೊರೆಗಳ ಸುರಿಮಳೆಯಾಗಿದೆ.

ಮುಲ್ತಾನ್ ನಿವಾಸಿಯಾಗಿರೋ ಮೊಹಮ್ಮದ್ ಅರ್ಶದ್ ಎಂಬಾತನ ಮದುವೆಯನ್ನು ಖಾನ್ಪುರದ ಯುವತಿ ಜೊತೆ ನಿಶ್ಚಯಿಸಲಾಗಿತ್ತು.

ವರನ ಕಡೆಯವರೆಲ್ಲ ವಧುವಿನ ಮನೆಗೆ ಬರುತ್ತಿದ್ದಂತೆ ಅವರ ಮೇಲೆ ಡಾಲರ್, ಮೊಬೈಲ್ ಸೇರಿದಂತೆ ವಿವಿಧ ಉಡುಗೊರೆಗಳ ಮಳೆಯನ್ನೇ ಸುರಿಸಲಾಗಿದೆ. ವರನ ಕಡೆಯವರು ವೇದಿಕೆ ಮೇಲೆ ನಿಂತು ಅತಿಥಿಗಳತ್ತ ಹಣವನ್ನು ಎಸೆದಿದ್ದಾರೆ. ಹಣವನ್ನು ಬಾಚಿಕೊಳ್ಳಲು ಅತಿಥಿಗಳು ಮುಗಿಬಿದ್ದಿದ್ದರು.

ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಇನ್ನೊಂದು ವಿಡಿಯೋದಲ್ಲಿ ವರನ ಕಡೆಯವರು ಬಸ್ ಮೇಲೆ ನಿಂತು ಅತಿಥಿಗಳ ಮೇಲೆ ಹಣವನ್ನು ಎಸೆದಿದ್ದಾರೆ. ಹಣ ಕೊಡ್ತಿರೋ ಸುದ್ದಿ ಗೊತ್ತಾಗ್ತಿದ್ದಂತೆ ಗ್ರಾಮಸ್ಥರೆಲ್ಲ ಮದುವೆ ಮನೆಗೆ ಧಾವಿಸಿದ್ದರು. ವರನಿಗೆ 8 ಸಹೋದರರಿದ್ದು, ಬ್ರಿಟನ್ ಮತ್ತು ಸೌದಿಯಲ್ಲಿ ಸೆಟಲ್ ಆಗಿದ್ದಾರಂತೆ. ಹಾಗಾಗಿ ಅತಿಥಿಗಳಿಗೆ ಡಾಲರ್ ಭಾಗ್ಯ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...