alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಫಿ ಲೋಟ ಕೆಳಗೆ ಬಿದ್ದಾಗ ಪ್ರಧಾನಿ ಮಾಡಿದ್ದೇನು?

ನೆದರ್ಲ್ಯಾಂಡ್ ಪ್ರಧಾನಮಂತ್ರಿ ಮಾರ್ಕ್ ರುಟ್ಟೆ ಅವರ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಧಾನಿಯವರ ಕೈನಿಂದ ಆಕಸ್ಮಿಕವಾಗಿ ಕಾಫಿ ಲೋಟ ಕೆಳಗೆ ಬಿದ್ದಿದ್ದು, ಬಳಿಕ ಸ್ವತಃ ಮಾರ್ಕ್ ರುಟ್ಟೆ ಅದನ್ನು ಸ್ವಚ್ಛಗೊಳಿಸಿದ್ದಾರೆ.

ಡಚ್ ಸಂಸತ್ತಿನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋವನ್ನು ರಾಜತಾಂತ್ರಿಕ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬಳಿಕ ಇದು ವೈರಲ್ ಆಗಿದ್ದು, ಪ್ರಧಾನಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಾರ್ಕ್ ರುಟ್ಟೆ, ಅಧಿಕಾರಿಗಳೊಂದಿಗೆ ನಡೆದು ಬರುತ್ತಿದ್ದಾಗ ಅವರ ಕೈಯಲ್ಲಿದ್ದ ಕಾಫಿ ಲೋಟ ಕೆಳಗೆ ಜಾರಿ ಬಿದ್ದಿದೆ. ಇದರಿಂದ ನೆಲದ ಮೇಲೆ ಕಾಫಿ ಹರಿದಿದ್ದು, ಸಮೀಪದಲ್ಲೇ ಇದ್ದ ಸ್ವಚ್ಛತಾ ಸಿಬ್ಬಂದಿಯಿಂದ ಮಾಪ್ ಪಡೆದ ಪ್ರಧಾನಿ ಅದನ್ನು ಸ್ವಚ್ಚಗೊಳಿಸಿದರು. ಇದನ್ನು ಕಂಡು ನೆರೆದಿದ್ದವರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...