alex Certify
ಕನ್ನಡ ದುನಿಯಾ       Mobile App
       

Kannada Duniya

ಕದಿಯಲು ಬಂದವ ಇಲಿ ಬೋನಿಗೆ ಬಿದ್ದಂತೆ ಸಿಕ್ಕಿಬಿದ್ದ

ಮಳಿಗೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಮುಂದಾದ ಯುವಕನೊಬ್ಬ ಇಲಿ ಬೋನಿಗೆ ಬಿದ್ದಂತೆ ಕಾಲು ಸಿಕ್ಕಿಸಿಕೊಂಡು ವಿಲವಿಲ ಒದ್ದಾಡಿದ ಘಟನೆ ಚೀನಾದಲ್ಲಿ ನಡೆದಿದೆ.

ಚೀನಾದ ಪೊಟಿಯನ್ ನಗರದಲ್ಲಿ ಎಲ್ಲರೂ ಗಾಢನಿದ್ರೆಗೆ ಜಾರಿದ್ದ ಸಂದರ್ಭದಲ್ಲಿ ಕಳ್ಳನೊಬ್ಬ ಅಂಗಡಿ ಮಳಿಗೆ ದೋಚಲು ಬಂದಿದ್ದಾನೆ.

ಆದರೆ, ಅಂಗಡಿಯೊಳಗೆ ನುಗ್ಗುವ ಆತನ ಪ್ರಯತ್ನ ಫಲಿಸದೇ, ಗೇಟ್ ನಲ್ಲಿ ಕಾಲು ಸಿಕ್ಕಿಸಿಕೊಂಡಿದ್ದಾನೆ. ಅಲ್ಲೇ ಕಾಲು ಸಿಕ್ಕಿಕೊಂಡಿದ್ದರಿಂದ ಬಿಡಿಸಿಕೊಳ್ಳಲು ವಿಲವಿಲ ಒದ್ದಾಡಿದ್ದಾನೆ.

ಬೆಳಿಗ್ಗೆ ಈತನನ್ನು ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಂಗಡಿ ಮಾಲೀಕ ಹಾಗೂ ಪೊಲೀಸರು ಕಳ್ಳನನ್ನು ಅಲ್ಲಿಂದ ಬಿಡಿಸಿದ್ದಾರೆ.

ಸಿಕ್ಕಿಬಿದ್ದ ಕಳ್ಳನ ಪಾಡು ಹೇಳತೀರದಾಗಿದೆ. ಈ ಕಳ್ಳ ಕಾಲು ಸಿಕ್ಕಿಸಿಕೊಂಡು ಒದ್ದಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಳ್ಳನ ವಿಡಿಯೋವನ್ನು 82,000 ಕ್ಕೂ ಅಧಿಕ ಮಂದಿ ಫೇಸ್ ಬುಕ್ ನಲ್ಲಿ ವೀಕ್ಷಿಸಿದ್ದು, ಅವರಿಗೆಲ್ಲಾ ನಗು ತಡೆಯಲಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...