alex Certify
ಕನ್ನಡ ದುನಿಯಾ       Mobile App
       

Kannada Duniya

ಯಂತ್ರದಲ್ಲಿ ಸಿಲುಕಿಕೊಂಡಿತ್ತು ಹಾವು

snake-vending-machine-650

ಕೆಲಸ ಮಾಡುವ ಸ್ಥಳದಲ್ಲಿ ಏಕಾಏಕಿ ಹಾವು ಕಂಡು ಬಂದರೆ ಕಕ್ಕಾಬಿಕ್ಕಿಯಾಗಿ ಓಡಿ ಹೋಗುವುದು ಸಹಜ. ಆದರೆ ಕಂಪನಿಯೊಂದರ ಯಂತ್ರದಲ್ಲಿ ಹಾವು ಸಿಲುಕಿಕೊಂಡಿದ್ದ ವೇಳೆ ವ್ಯಕ್ತಿಯೋರ್ವ ಅದನ್ನು ಸುರಕ್ಷಿತವಾಗಿ ಹಿಡಿದು ಹೊರ ತೆಗೆದಿದ್ದಾನೆ.

ಇಲಿನಾಯ್ಸ್ ನ ಚಾಟ್ಸ್ವರ್ತ್ ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಕಂಪನಿಯೊಂದರ ವೆಂಡಿಂಗ್ ಯಂತ್ರದಲ್ಲಿ ಹಾವೊಂದು ಸಿಲುಕಿಕೊಂಡಿತ್ತು. ಯಂತ್ರದಲ್ಲಿದ್ದ ವೈರ್ ಗಳಂತೆ ಹಾವೂ ಕಾಣುತ್ತಿದ್ದು, ಕೊನೆಗೆ ಅದನ್ನು ಗಮನಿಸಿದವನೊಬ್ಬ ಕೈಗೆ ಗ್ಲೌಸ್ ಹಾಕಿಕೊಂಡು ಅದನ್ನು ಹಿಡಿದಿದ್ದಾನೆ.

ಮೊದಲಿಗೆ ಅದೊಂದು ವಿಷಪೂರಿತ ಹಾವೆಂದು ಭಾವಿಸಿದ್ದವರು ಅದು ಅಪಾಯಕಾರಿಯಲ್ಲವೆಂದು ಅರಿವಾದ ಬಳಿಕ ನಿಟ್ಟುಸಿರುಬಿಟ್ಟಿದ್ದಾರೆ. ಹಿಡಿದ ಹಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...