alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಕ್ರೂರ ಪ್ರಾಣಿಗಳು ಆಕಸ್ಮಿಕವಾಗಿ ಎದುರಾದ್ರೆ ಜೀವ ಝಲ್ ಅನ್ನುತ್ತೆ. ಆ ಪ್ರಾಣಿಗಳು ಎಲ್ಲಿ ತಮ್ಮ ಬಲಿ ಹಾಕಿಬಿಡ್ತವೋ ಅನ್ನೋ ಭಯ ಶುರುವಾಗುತ್ತೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋ ಒಂದು ಕ್ರೂರ ಪ್ರಾಣಿಗಳ ಪ್ರೀತಿ ಏನು ಅನ್ನೋದನ್ನ ತೋರಿಸುತ್ತಿವೆ.

ವಿನೋಹಿರಿಕ್ ನಲ್ಲಿರೋ ಸಫಾರಿ ಜಂಗಲ್ ವೀಕ್ಷಣೆಯನ್ನ ಪ್ರವಾಸಿಗರು ತೆರೆದ ವಾಹನದಲ್ಲಿ ಮಾಡ್ತಿದ್ರು. ಈ ವೇಳೆ ಆಕಸ್ಮಿಕವಾಗಿ ಸಿಂಹವೊಂದು ಎದುರಾಯ್ತು. ಕೂಡಲೇ ವಾಹನ ಚಾಲಕ ವಾಹನವನ್ನು ನಿಲ್ಲಿಸಿದ. ಆನಂತರದಲ್ಲಿ ಆ ಸಿಂಹ ವಾಹನದಲ್ಲಿದ್ದ ಚಾಲಕನನ್ನು ಮುದ್ದಾಡೋಕೆ ಶುರುಮಾಡಿತು. ಅಷ್ಟೇ ಅಲ್ಲ ವಾಹನದಲ್ಲಿದ್ದ ಎಲ್ಲರ ಹತ್ತಿರಕ್ಕೂ ತೆರಳಿ ಅವರನ್ನ ಅಪ್ಪಿ ಮುದ್ದಾಡಿದೆ. ಆನಂತರದಲ್ಲಿ ತಿಳಿದು ಬಂದ ವಿಚಾರ ಏನಂದ್ರೆ ಆ ಸಿಂಹ ಸಫಾರಿ ಜಂಗಲ್ ನಲ್ಲಿ ಸಾಕು ಪ್ರಾಣಿ ಅನ್ನೋದು.

ಆದ್ರೆ ಈ ವಿಚಾರ ಪ್ರವಾಸಿಗರಿಗೆ ಗೊತ್ತಿರಲಿಲ್ಲ. ದೃಶ್ಯವನ್ನು ಚಿತ್ರೀಕರಿಸಿಕೊಂಡ ಪ್ರಯಾಣಿಕರು ಕೂಡಲೇ ಅದನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಸಿಂಹದ ಪ್ರೀತಿ ನೋಡಿದ ಸಾಕಷ್ಟು ಜನರು ದಂಗಾಗಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಪಾರ್ಕ್ ನಲ್ಲಿ ಸಿಂಹವೊಂದು ಮಹಿಳೆಯನ್ನು ಕಚ್ಚಿ ಗಾಯಗೊಳಿಸಿದ ಘಟನೆ ವರದಿಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...