alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲಕನ ಸಮಯಪ್ರಜ್ಞೆಯಿಂದ ಉಳೀತು ಪ್ರಯಾಣಿಕರ ಪ್ರಾಣ

polend

ಪೋಲೆಂಡ್: ಚಾಲಕರ ನಿರ್ಲಕ್ಷ್ಯ, ತಾಂತ್ರಿಕ ದೋಷದಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಮತ್ತೆ ಕೆಲವು ಚಾಲಕರು ಸಂಭವಿಸಬಹುದಾದ ಅಪಘಾತ ತಡೆಯುತ್ತಾರೆ. ಇನ್ನೂ ಕೆಲವರು ಎದುರಾಗುವ ಅಪಾಯದ ಬಗ್ಗೆ ಸೂಚನೆ ನೀಡುತ್ತಾರೆ.

ಪೋಲೆಂಡ್ ನಲ್ಲಿ ರೈಲು ಚಾಲಕನೊಬ್ಬ, ತೋರಿದ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಅತಿ ವೇಗವಾಗಿ ರೈಲು ಸಾಗುತ್ತಿದ್ದ ಸಂದರ್ಭದಲ್ಲಿ ಕ್ರಾಸಿಂಗ್ ನಲ್ಲಿ ಹಳಿಯ ಮೇಲೆ ಟ್ರಕ್ ಕೆಟ್ಟು ನಿಂತಿರುವುದು ಚಾಲಕನಿಗೆ ಕಂಡಿದೆ. ವೇಗದಲ್ಲಿರುವ ರೈಲನ್ನು ನಿಲ್ಲಿಸಿ, ಟ್ರಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದು ಸಾಧ್ಯವಿಲ್ಲ ಎಂಬುದು ಚಾಲಕನ ಅರಿವಿಗೆ ಬಂದಿದೆ. ಕೂಡಲೇ ಆತ ಪ್ರಯಾಣಿಕರಿಗೆ ಸೂಚನೆ ಕೊಟ್ಟಿದ್ದಾನೆ.

ಆ ಚಾಲಕ ನೀಡಿದ ಸಲಹೆಯಂತೆ ಪ್ರಯಾಣಿಕರೆಲ್ಲಾ ಕೆಳಗೆ ಮಲಗಿದ್ದಾರೆ. ಗಟ್ಟಿಯಾಗಿ ಕಂಬಿ, ಸೀಟ್ ಗಳನ್ನು ಹಿಡಿದುಕೊಂಡಿದ್ದಾರೆ. ವೇಗವಾಗಿದ್ದ ರೈಲು ಕೆಲವೇ ಕ್ಷಣಗಳಲ್ಲಿ ಹಳಿ ಮೇಲೆ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಪ್ರಯಾಣಿಕರೆಲ್ಲಾ ಅಪಾಯದಿಂದ ಪಾರಾಗಿದ್ದು, ಚಾಲಕನ ಸಮಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...