alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಮನ ಗೆದ್ದಿದ್ದಾನೆ ಈ ಪುಟ್ಟ ಬಾಲಕ

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿರುವ ಪುಟ್ಟ ಬಾಲಕನ ಕಾರ್ಯಕ್ಕೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ದಾರಿಹೋಕರೊಬ್ಬರು ಈ ವಿಡಿಯೋವನ್ನು ತೆಗೆದಿದ್ದು, ಮೌರಿಸ್ ಆಡಮ್ಸ್ ಜೂನಿಯರ್ ಎಂಬ ಎಂಟು ವರ್ಷದ ಬಾಲಕ ತನ್ನ ಪೋಷಕರೊಂದಿಗೆ ಕಾರಿನಲ್ಲಿ ಹೋಗುವ ವೇಳೆ ವೃದ್ಧೆಯೊಬ್ಬರು ಮೆಟ್ಟಿಲನ್ನು ಏರಲು ಕಷ್ಟ ಪಡುತ್ತಿರುವುದು ಕಣ್ಣಿಗೆ ಬಿದ್ದಿದೆ.

ಇದನ್ನು ನೋಡಿದ ಮೌರಿಸ್ ತಡಮಾಡದೆ ತನ್ನ ಪೋಷಕರಿಗೆ ಕಾರು ನಿಲ್ಲಿಸಲು ಹೇಳಿ ವೃದ್ಧೆಯ ನೆರವಿಗೆ ಧಾವಿಸಿದ್ದಾನೆ. ಊರುಗೋಲಿನ ಸಹಾಯದಿಂದ ಮೆಟ್ಟಿಲನ್ನು ಏರಲು ಕಷ್ಟಪಡುತ್ತಿದ್ದ ವೃದ್ಧೆಗೆ ಮೌರಿಸ್ ಆಸರೆಯಾಗಿದ್ದಾನೆ.

ಮೌರಿಸ್ ಸಹಾಯದಿಂದ ಮೆಟ್ಟಿಲನ್ನು ಏರಿದ ವೃದ್ದೆ ಬಳಿಕ ಆತನನ್ನು ಆಲಂಗಿಸಿಕೊಂಡು ಧನ್ಯವಾದ ಹೇಳಿದ್ದು, ಇದೆಲ್ಲವನ್ನೂ ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ, ಇಂದಿನ ಯುವ ಪೀಳಿಗೆಗೆ ಈ ಬಾಲಕ ಮಾದರಿ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...